ಉಳವಿ ಮಹಾ ರಥೋತ್ಸವ ನಾಳೆ

Ulavi-Jatra-scaled
Published on

ಜೊಯಿಡಾ: ತಾಲೂಕಿನ ಶ್ರೀ ಕ್ಷೇತ್ರ ಉಳವಿ ಚನ್ನಬಸವೇಶ್ವರ ಜಾತ್ರಾ ಮಹೋತ್ಸವ  ಪ್ರಾರಂಬವಾಗಿ ಮಹಾ ರಥೊತ್ಸವವು ಫೆ. 24 ರಂದು ಸಾಯಂಕಾಲ 4 ಗಂಟೆಗೆ ನಡೆಯಲಿದೆ. ಪ್ರತಿ ವರ್ಷಕ್ಕಿಂತ ಈ ವರ್ಷ ಜಾತ್ರೆಗೆ  ಭಕ್ತರ ಆಗಮನ ಹೆಚ್ಚಾಗಲಿದೆ ಎಂಬ  ಸೂಚನೆ ಸದ್ಯ ಇಲ್ಲಿ ಬಂದಿರುವ ಭಕ್ತರ ಸಂಖ್ಯೆಯಿಂದ ಗೊತ್ತಾಗುತ್ತಿದೆ. ಕಳೆದ  ಎರಡು ರ್ಷಗಳಿಂದ ಕೊವಿಡ್ ಕಾರಣ ಜಾತ್ರೆ ಕಟ್ಟುನಿಟ್ಟಾಗಿ ನಡೆದಿದ್ದು,ಈ ವರ್ಷ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಇರಲಿದೆ. ಇದಲ್ಲದೆ. ಮಹಿಳೆಯರಿಗೆ  ಉಚಿತ ಬಸ್ ವ್ಯವಸ್ಥೆ ಇರುವ ಕಾರಣ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ.

 ಉಳವಿ ಜಾತ್ರೆ ಎಂದರೆ ಬಸವಣ್ಣನ ಜಾತ್ರೆ ಎಂದೆ ಪ್ರಸಿದ್ದ. ಕಳೆದ ವರ್ಷಕ್ಕಿಂತ ಇಗಾಗಲೆ  ಚಕ್ಕಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿದೆ. ಈಗಾಗಲೆ 1385 ಕ್ಕೂ ಹೆಚ್ಚು ಚಕ್ಕಡಿಗಾಡಿಗಳು ಉಳವಿಗೆ ಆಗಮಿಸಿ ಜಾತ್ರಾ ಮಹೋತ್ಸವದಲ್ಲಿ ಬಾಗಿಯಾಗಿದೆ.

ಹುಬ್ಬಳ್ಳಿ ಹತ್ತಿರದ ಹೆಬ್ಬಳ್ಳಿ ಊರಿನ ಈರಣ್ಣ  ಕರಿಗಟ್ಟಿ ಎನ್ನುವ ರೈತ ಕಳೆದ 7 ವರ್ಷಗಳಿಂದ ಪಾದ ಯಾತ್ರೆಯ ಮೂಲಕ ಉಳವಿ ಜಾತ್ರೆಗೆ ಬಂದು ಶ್ರೀ ಚನ್ನಬಸವಣ್ಣನ ದರ್ಶನ ಪಡೆಯುತ್ತಿದ್ದರಂತೆ. ಈ ವರ್ಷ ಅವರು ದೇವರಿಗೆ ಹರಕೆ ಹೊತ್ತುಕೊಂಡಂತೆ ಎತ್ತುಗಳಿಲ್ಲ ಕಾಲಿ ಚಕ್ಕಡಿಯನ್ನ ಹೆಬ್ಬಳ್ಳಿಯಿಂದ ಒಬ್ಬರೆ ಎತ್ತುಗಳ ಬದಲಾಗಿ ತಾವೆ ಹೆಗಲುಕೊಟ್ಟು ಎಳೆದುಕೊಂಡು  140 ಕಿ.ಮಿ ಪ್ರಯಾಣಿಸಿ ಇಂದು ಗುರುವಾರ ಸಂಜೆ ಉಳವಿಗೆ ತಲುಪಿದ್ದಾರೆ.

ಉಳವಿಯಲ್ಲಿ ಜಾತ್ರಾ ತಯಾರಿ ಬರ್ಜರಿಯಾಗಿ ಮಾಡಿಕೊಳ್ಳಲಾಗಿದೆ. ಬರುವ ಪ್ರತಿಯೋಂದು ಚಕ್ಕಡಿ ಮತ್ತು ಟ್ಯಾಕ್ಟರ್ ಗಳಿಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೆ ಬಂದಂತ ಎಲ್ಲ ಚಕ್ಕಡಿಗಳು,ಟ್ಯಾಕ್ಟರ್ ಗಳು ಉಳವಿ ಧೆವಸ್ಥಾನ ಪಕ್ಕದ ಗದ್ದೆ ಬಯಲಿನಲ್ಲಿ ನಿಲ್ಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net