

ಹಾನಗಲ್ಲ: ಉಳವಿ ಜಾತ್ರೆಗೆ ಹೋಗಿ ವಾಪಸ್ ಬರುತ್ತಿದ್ದ ಯುವಕನೊಬ್ಬ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಮೃತಪಟ್ಟ ಘಟನೆ ತಾಲೂಕಿನ ಹರಳಕೊಪ್ಪ ಕ್ರಾಸ್ ಬಳಿ ಭಾನುವಾರ ನಡೆದಿದೆ.
ಬ್ಯಾಡಗಿ ತಾಲೂಕು ಘಾಳಪೂಜೆ ಗ್ರಾಮದ ಹರೀಶ ಮಂಜಪ್ಪ ನೆಲ್ಲಿಕೊಪ್ಪದ ಮೃತ ಬೈಕ್ ಸವಾರ.
ಈತ ಉಳವಿ ಜಾತ್ರೆಗೆ ಹೋಗಿ ವಾಪಸ್ ಬರುತ್ತಿದ್ದ ಸಮಯದಲ್ಲಿ ಬೈಕ್ ಅಪಘಾತವಾಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.