ಉಳಾಯಿಬೆಟ್ಟು ಕಲ್ಲಿನ ಕ್ವಾರಿಗೆ ಇಳಿದ ಯುವಕ ನೀರಲ್ಲಿ ಮುಳುಗಿ ಮೃತ್ಯು

mng--24 july shiyaz
Published on

ಮಂಗಳೂರು: ನಗರದ ಹೊರ ವಲಯದ ಮಲ್ಲೂರು ಸಮೀಪದ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ಭಾನುವಾರ ಸಂಜೆ ಈಜಲು ಕಲ್ಲಿನ ಕ್ವಾರಿಗೆ ಇಳಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.


ಜೋಕಟ್ಟೆಯ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ಶಿಯಾಝ್ (19) ಮೃತಪಟ್ಟ ಯುವಕ ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.


ಬೆಳಿಗ್ಗೆ ಶಿಯಾಝ್ ಉಳಾಯಿಬೆಟ್ಟುವಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಸಂಜೆಯ ವೇಳೆಗೆ ತನ್ನ ಸ್ನೇಹಿತರೊಂದಿಗೆ ಬದ್ರಿಯಾ ನಗರದ ಪೆರ್ಮುಂಕಿ ಕಾಯರ ಪದವುನಲ್ಲಿರುವ ಕಲ್ಲಿನ ಕ್ವಾರಿಯ ಹೊಂಡದಲ್ಲಿ ತುಂಬಿದ ನೀರಲ್ಲಿ ಈಜಲು ಹೋಗಿದ್ದಾರೆ. ಈ ಸಂದರ್ಭ ನದಿಯ ಆಳ ತಿಳಿಯಲಾಗದೆ ಈಜಲು ಮುಂದಾದಾಗ ನೀರಲ್ಲಿ ಮುಳುಗಿದರು ಎಂದು ಪೊಲೀಸರು ತಿಳಿಸಿದ್ದಾರೆ.


ತಕ್ಷಣ ಸ್ನೇಹಿತರು ಸಹಿತ ಸ್ಥಳೀಯರು ಶಿಯಾಝ್‌ನನ್ನು ರಕ್ಷಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net