ಶಾಸಕ ಪೊನ್ನಣ್ಣ ಭೇಟಿ ಮಾಡಿ ಅಭಿನಂದಿಸಿದ ಯುಕೊ

26MDK08
Published on

ಮಡಿಕೇರಿ:

ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ನೇತೃತ್ವದಲ್ಲಿ ಯುಕೊ ಸಂಘಟನೆಯ ನಿಯೋಗ ಶುಕ್ರವಾರ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರನ್ನು ಅವರ ವಿರಾಜಪೇಟೆ ನಿವಾಸದಲ್ಲಿ ಭೇಟಿ ಮಾಡಿ ಹೂಗುಚ್ಛ ಮತ್ತು ಕೊಡವ ಸಾಂಪ್ರದಾಯಿಕ ಚಾಲೆ ನೀಡಿ ಅಭಿನಂದಿಸಲಾಯಿತು. ಈ ವೇಳೆ ಕೊಡವರ ಪ್ರಮುಖ ಮೂರು ಬೇಡಿಕೆಗಳನ್ನು ಪೊನ್ನಣ್ಣ ಅವರ ಗಮನಕ್ಕೆ ತರಲಾಯಿತು. ಈಗಾಗಲೇ ಸರ್ಕಾರಿ ಆದೇಶದ ಮೂಲಕ ಘೋಷಣೆಯಾಗಿರುವ ಕರ್ನಾಟಕ ರಾಜ್ಯ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ ನೂರು ಕೋಟಿ ರೂ. ಅನುದಾನ ನೀಡಬೇಕು. ಹಿಂದುಳಿದ ವರ್ಗಗಳ ಮೀಸಲಾತಿಯ ರಾಜ್ಯ ಪಟ್ಟಿಯಲ್ಲಿ ಪ್ರವರ್ಗ ೩ಎ ಯಲ್ಲಿ ವರ್ಗೀಕರಣ , ಕೊಡವರನ್ನು ಪ್ರವರ್ಗ ೩ಎ ಯ ಕೇಂದ್ರ ಪಟ್ಟಿಯಲ್ಲಿ ಸೇರಿಸಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಿಫಾರಸ್ಸು ಮಾಡಬೇಕು. ಕೊಡವರ ಪಾರಂಪರಿಕ ತಾಣಗಳಾದ ಮಂದ್, ಮಾನಿ, ಕ್ಯಾಕೊಳ, ಚೂಟ್‌ಂಗಳದಂತಹ ಸಾಂಸ್ಕೃತಿಕ ಕೇಂದ್ರಗಳ ಕಂದಾಯ ದಾಖಲಾತಿಗಳನ್ನು ಸರಿ ಪಡಿಸಬೇಕು ಎನ್ನುವ ಬೇಡಿಕೆ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಪೊನ್ನಣ್ಣ, ಸಂಪುಟ ರಚನೆಯ ನಂತರ ಸರ್ಕಾರದೊಂದಿಗೆ ವ್ಯವಹರಿಸುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ, ಅಪ್ಪಾರಂಡ ವೇಣು ಪೊನ್ನಪ್ಪ, ನೆಲ್ಲಮಕ್ಕಡ ಮಾದಯ್ಯ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನಂದೇಟಿರ ರವಿ ಸುಬ್ಬಯ್ಯ, ಅಜಿನಿಕಂಡ ಸೂರಜ್ ತಿಮ್ಮಯ್ಯ, ಮಚ್ಚಾಮಾಡ ರಮೇಶ್, ತೀತಿಮಾಡ ಬೋಸು ಅಯ್ಯಪ್ಪ, ಪುದಿಯೊಕ್ಕಡ ದಿನೇಶ್, ಬೊಳಿಯಂಗಡ ಬೋಪಣ್ಣ, ಪಳಂಗಂಡ ಸುಬ್ಬಣ್ಣ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಪಾಂಡಂಡ ಸ್ವಾತಿ, ಬೊಳ್ಳಚೆಟ್ಟಿರ ಮೈನಾ, ಕಳ್ಳಿಚಂಡ ದೀನ ಉತ್ತಪ್ಪ, ತನ್ವಿ ಉತ್ತಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net