ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಸ್ವಾಮಿ ಬೆಳ್ಳಿ ರಥೋತ್ಸವ

Ukkadagatri, Sri Karibasaveshwara Swami, Silver Chariot Festival,
Published on

ಮಲೇಬೆನ್ನೂರು: ಸಮೀಪದ ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿ ಬೆಳ್ಳಿ ರಥೋತ್ಸವ ಸೋಮವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಪುಣ್ಯಾರಾಧನೆ ಪ್ರಯುಕ್ತ ಭಕ್ತರು ‘ ಶ್ರೀ ಕರಿಬಸವೇಶ್ವರ ಮಹಾರಾಜ್ ಕೀ ಜೈ’ ಎಂದು ಜೈಕಾರ ಹಾಕ್ತು ರಥೋತ್ಸವದಲ್ಲಿ ಸಾಗಿದರು. ಮೂಲ ವಿಗ್ರಹಕ್ಕೆ ರುದ್ರಾಭಿಷೇಕ, ಲೋಕ ಕಲ್ಯಾಣಾರ್ಥವಾಗಿ ದೇವಾಲಯದಲ್ಲಿ ಗಣ ಹೋಮ, ರುದ್ರ ಹೋಮ ಜರುಗಿತು.

ನಂದಿಗುಡಿ ವೃಷಭಪುರಿ ಪೀಠಾಧಿಪತಿ ಸಂಸ್ಥಾನದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಹಾಗೂ ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರಾವಣ ಮಾಸದ ಮೂರನೇ ಸೋಮವಾರದ ವಿಶೇಷ ಪೂಜೆ ಸಲ್ಲಿಸಿದರು. ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಹೂವಿನ ಅಲಂಕೃತ ರಥ ರಾಜಬೀದಿಯಲ್ಲಿ ಸಾಗಿತು. ದೇವಾಲಯ ಹಾಗೂ ರಾಜಬೀದಿಯಲ್ಲಿ ವಿದ್ಯುತ್ ಅಲಂಕಾರಗೊಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net