

ಕಡಬ: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2024- 25ನೇ ಸಾಲಿನ ಯು.ಕೆ.ಜಿ ತರಗತಿ ವಿದ್ಯಾರ್ಥಿಗಳ ಘಟಿಕೋತ್ಸವ ದಿನ (ಗ್ರಾಜುಯೇಶನ್ ಡೇ) ನಡೆಯಿತು.
ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ವಿಜ್ಞಾನ ಬೆಳೆದಂತೆಲ್ಲ್ಲ ಮಕ್ಕಳು ಬೆಳೆದಿದ್ದಾರೆ. ಮಕ್ಕಳನ್ನು ರೂಪಿಸುವ ಕೆಲಸ ಕೇವಲ ಶಿಕ್ಷಕರದ್ದು ಮಾತ್ರವಲ್ಲ ಪಾಲಕರು ಮತ್ತು ಶಿಕ್ಷಕರು ಸೇರಿದಾಗ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯ ಎಂದರು.
ಶಾಲಾ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಮಾತನಾಡಿ, ಪೋಷಕರು ಮತ್ತು ಶಿಕ್ಷಕರು ಒಟ್ಟು ಸೇರಿದರೆ ಮಗುವಿನ ಸವಾರ್ಂಗೀಣ ಬೆಳವಣಿಗೆ ಸಾಧ್ಯ ಎಂದರು. ಸಮಾರಂಭವನ್ನು ಕಸ್ತೂರಿ ಕಲಾ ಎಸ್.ರೈ ಉದ್ಘಾಟಿಸಿದರು. ಸರ್ವೆ ಅಂಗನವಾಡಿ ಶಿಕ್ಷಕಿ ಮೋಹಿನಿ ಎನ್. ಆರ್ ಅತಿಥಿಯಾಗಿ ಭಾಗವಹಿಸಿದರು.
ಪಾಲಕರಾದ ಸಚಿನ್ ಕುಮಾರ್, ಎಸ್.ಎನ್.ಆರ್. ರೂರಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ರಶ್ಮಿ ಅಶ್ವಿನ್ ಶೆಟ್ಟಿ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮೀ ಎಸ್.ರೈ, ವಿದ್ಯಾರಶ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸೀತಾರಾಮ ಕೇವಳ ಮತ್ತು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ಉಪಸ್ಥಿತರಿದ್ದರು.
ವಿದ್ಯಾರ್ಥಿ ಅವಿ ಅಶ್ವಿನ್ ಶೆಟ್ಟಿ ಸಂವಿಧಾನದ ಪೀಠಿಕೆ ವಾಚಿಸಿದರು. ಕ್ಷಿತಿ ಎಸ್.ಕೆ ಸ್ವಾಗತಿಸಿ, ಹಸ್ಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಹವನ್ ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಸುನೀತಾ ಜೆ.ಕೆ., ತಿರುಮಲೇಶ್ವರಿ ಕೆ. ಮತ್ತು ಸ್ಮಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.