ಹಿರಿಯ ನಾಗರಿಕರಿಗೆ ಸಿಗದ ಉಜ್ವಲ - ಸತಾಯಿಸುತ್ತಿರುವ ಅಽಕಾರಿಗಳು - ಕೊಟ್ಟದ್ದು 5 ಕೆಜಿ ಸಿಲಿಂಡರ್

Published on

ಪುತ್ತೂರು: ಹಿರಿಯ ನಾಗರಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ತ್ವರಿತ ಸೇವೆಯನ್ನು ನೀಡಬೇಕೆಂಬ ಕಾನೂನು ಇದ್ದರೂ ಸರ್ಕಾರಿ ಅಽಕಾರಿಗಳು ಸಮರ್ಪಕ ಮಾಹಿತಿಯನ್ನು ನೀಡುತ್ತಿಲ್ಲ ಹಾಗೂ ದೂರಿಗೆ ತಿಂಗಳುಗಟ್ಟಲೆ ಸರಿಯಾದ ಸ್ಪಂದನೆಯನ್ನೂ ನೀಡುತ್ತಿಲ್ಲ. ಇದರಿಂದ ಹಿರಿಯ ನಾಗರಿಕರು ನಿತ್ಯ ಕಚೇÃರಿಯಿಂದ ಕಚೇರಿಗೆ ಅಲೆದು ಅಽಕಾರಿಗಳ ಬಳಿಗೆ ಭಿಕ್ಷುಕರಂತೆ ಬೇಡಿಕೊಂಡು ಹೋಗುವ ದುಸ್ಥಿತಿ ಎದುರಾಗುತ್ತಿದೆ.


ಮಹಿಳೆಯರ ಸಬಲೀಕರಣದ ಜತೆಗೆ ಆರೋಗ್ಯ ರಕ್ಷಿಸುವ ನಿಟ್ಟಿನಲ್ಲಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಬಿ.ಪಿ.ಎಲ್. ಕುಟುಂಬಗಳು ಇದರ ಫಲಾನುಭವಿಗಳಾಗಿವೆ. ಪೆರುವಾಯಿ ಗ್ರಾಮದ ಕುಟುಂಬವೊAದಕ್ಕೆ ಉಜ್ವಲ ಯೋಜನೆಯಲ್ಲಿ ಗ್ಯಾಸ್ ವಿತರಣೆಯಲ್ಲಿ 5ಕೆ.ಜಿ. ಸಿಲಿಂಡರ್ ಲಭ್ಯವಾಗಿದ್ದು, ಇದಕ್ಕೆ ಆ ಸಮಯದಲ್ಲೇ ಆಕ್ಷೇಪ ವ್ಯಕ್ತಪಡಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಸದ್ಯ ಇದನ್ನು ಪಡೆದುಕೊಳ್ಳಿ, ಮುಂದಿನ ದಿನ ಬದಲಾಯಿಸಿಕೊಡಲಾವುದು ಎಂಬ ಭರವಸೆಯನ್ನು ಏಜೆನ್ಸಿಯವರು ನೀಡಿದ್ದರು.


ಪದೇಪದೆ 5 ಕೆ.ಜಿ. ಸಿಲಿಂಡರ್ ಹಿಡಿದು ಓಡಾಟ ಮಾಡಲಾಗದ ಕುಟುಂಬ ಮತ್ತೆ ಮತ್ತೆ ಕೇಳಿಕೊಂಡಿದೆ. 4 ವರ್ಷ ಕಳೆದರೂ ಬದಲಾಯಿಸದ ಹಿನ್ನಲೆಯಲ್ಲಿ ಕಳೆದ ಮಾರ್ಚ್ನಲ್ಲಿ ಬಂಟ್ವಾಳ ತಹಸೀಲ್ದಾರ್ ಅವರಿಗೆ ದೂರು ನೀಡಿದ್ದಾರೆ. ತಿಂಗಳು ಕಳೆದರೂ ಸರಿಯಾದ ಸ್ಪಂದನೆ ಅಲ್ಲಿಂದ ಲಭಿಸದ ಹಿನ್ನಲೆಯಲ್ಲಿ ವಿಜಯವಾಣಿ ಗಮನಕ್ಕೆ ತಂದಿದ್ದರು. ಮಾರ್ಚ್ ಕೊನೆಯಲ್ಲಿ ತಹಸೀಲ್ದಾರಿಗೆ ದೂರಿನ ಪ್ರತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದುವರೆಗೆ ಹಿರಿಯ ನಾಗರೀಕರಿಗೆ ನ್ಯಾಯ ಒದಗಿಸಲು ಮುಂದಾಗಿಲ್ಲ.


ಅಽಕಾರಿ ವರ್ಗ ಜನಸಾಮಾನ್ಯರಿಗೆ ಪ್ರತಿಯೊಂದು ವಿಚಾರವನ್ನೂ ಕಾನೂನು ಚೌಕಟ್ಟಿನಲ್ಲಿ ಮಾಡುವುದಾಗಿ ಹೇಳಿ ಅಗತ್ಯ ವ್ಯವಸ್ಥೆಯಿಂದಲೇ ವಂಚಿತರಾಗುವAತೆ ಮಾಡುತ್ತಿದೆ. ಚುನಾವಣೆ ಮುಗಿದು ದಿನಗಳು ಕಳೆದರೂ, ಇನ್ನೂ ಬಡ ಕುಟುಂಬ ಓಡಾಟ ಮಾಡುತ್ತಿದೆ. ಕುಟುಂಬಕ್ಕೆ ನ್ಯಾಯ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಅಽಕಾರಿ ವರ್ಗ ಜನರ ತೆರಿಗೆ ಹಣದಲ್ಲಿ ವೇತನ ಪಡೆಯುತ್ತಿದ್ದೇವೆ ಎಂಬ ಕಲ್ಪನೆಯಲ್ಲೇ ಇಲ್ಲದಿರುವುದು ದುರಂತವಾಗಿದೆ.

ಚುನಾವಣೆ ನೆಪ
ಚುನಾವಣೆ ಸಮಯದಲ್ಲಿ ಎಲ್ಲೂ ಇಲ್ಲದ ಕಾನೂನುಗಳನ್ನು ಹೇಳಿಕೊಂಡು ಯಾವ ಕೆಲಸವನ್ನು ಸರಿಯಾಗಿ ಮಾಡದಿದ್ದರೂ, ದಂಡನಾಯಕರAತೆ ವರ್ತಿಸುವ ಅಽಕಾರಿ ವರ್ಗ ಆ ಬಳಿಕ ಗಾಳಿ ತೆಗೆದ ಬಲೂನಿಂತಾಗುತ್ತಾರೆ. ಚುನಾವಣೆ ಸಮಯದಲ್ಲಿ ಸುಮ್ಮನೆ ಸುತ್ತಾಡಿದರೂ, ಆ ನೆಪದಲ್ಲಿ ಜನಸಾಮಾನ್ಯರ ಅತಿ ಮುಖ್ಯ ಕೆಲಸವನ್ನು ಸಮಯಕ್ಕೆ ಮಾಡಿಕೊಡುತ್ತಿಲ್ಲ. ಕೇಳಿದರೆ ಕಾನೂನು ಗೊತ್ತಲ್ಲಾ ಎಂಬ ಉದ್ದಟತನದ ಮಾತುಗಳೇ ಕೇಳಿಬರುತ್ತವೆ.

ಒಂದು ವರ್ಷದಿಂದ ಗ್ಯಾಸ್ ಇಲ್ಲ
ಪೆರುವಾಯಿ ನಿವಾಸಿಗೆ ಒಂದು ವರ್ಷದಿಂದ ಗ್ಯಾಸ್ ವಿತರಣೆಯೇ ಸ್ಥಗಿತವಾಗಿದೆ. ಕುಟುಂಬ ಅವಿದ್ಯಾವಂತರಾದ ಕಾರಣ ಈಗಿನ ಆನ್‌ಲೈನ್ ಬುಕ್ಕಿಂಗ್ ವ್ಯವಸ್ಥೆಯಲ್ಲಿ ಸಿಲಿಂಡರ್ ತರಿಸಿಕೊಳ್ಳಲಾಗದೆ ಸರ್ಕಾರದ ಯೋಜನೆಯಿಂದ ವಂಚಿತವಾಗಿದೆ. ಈ ಬಗ್ಗೆ ತಹಸೀಲ್ದಾರರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರೂ, ಸರಿಯಾದ ವ್ಯವಸ್ಥೆ ಕಲ್ಪಿಸಬೇಕಾದ ತಾಲೂಕು ಮಟ್ಟದ ಅಽಕಾರಿ ವರ್ಗ ನಿರ್ದಯಿಗಳಂತೆ ವರ್ತಿಸಿದೆ.


ಸ್ಪಂದನೆಯ ಭರವಸೆ
ಫಲಾನುಭವಿಗಳ ಸಂಬAಽಕರೊಬ್ಬರು ಮತ್ತೆ ಸಮಸ್ಯೆಯನ್ನು ಹೇÃಳಿಕೊಂಡಿದ್ದು, ತಕ್ಷಣ ತಹಸೀಲ್ದಾರರು ಸಂಪರ್ಕಿಸುವ ಕಾರ್ಯ ಮಾಡಿದರೂ, ಯಾವುದೇ ಉತ್ತರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರು ಸಹಾಯಕ ಆಯುಕ್ತರ ಗಮನಕ್ಕೆ ತಂದಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ವಿಜಯವಾಣಿಗೆ ನೀಡಿದ್ದಾರೆ.


ಹಿರಿಯ ನಾಗರಿಕರ ಪಾಲನೆ ಪೋಷಣಾ ಕಲ್ಯಾಣ ಅಽನಿಯಮದ ಪ್ರಕಾರ ಹಿರಿಯರ ಮಕ್ಕಳಿಗೆ ಶಿಕ್ಷೆ, ದಂಡ ವಿಽಸುವಂತೆ ಹಿರಿಯ ನಾಗರಿಕರ ಬೇರೆ ಬೇರೆ ವಿಚಾರದಲ್ಲಿ ಆಡಳಿತ ವ್ಯವಸ್ಥೆಯಿಂದ ಸೇವೆ ಪಡೆಯಲು ವಂಚನೆ ಅನ್ಯಾಯ ವಿಳಂಬ ನೀತಿ ಅನುಸರಿಸಿದಾಗ ಸರ್ಕಾರಿ ನೌಕರರಿಗೂ ಶಿಕ್ಷೆ ದಂಡ ಇತ್ಯಾದಿ ವಿಽಸುವಂತಾಗಬೇಕು.
| ಸಂಜೀವ ಕಬಕ
ಬಳಕೆದಾರರ ವೇದಿಕೆ ಪುತ್ತೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net