ತೋಳಗಳ ದಾಳಿಗೆ 25 ಕುರಿಮರಿ ಬಲಿ

Untitled design (24)
Published on

ಉಜ್ಜಿನಿ: ಗ್ರಾಮದ ಹೊರವಲಯದಲ್ಲಿ ಶನಿವಾರ ರಾತ್ರಿ ತೋಳಗಳು ಹಟ್ಟಿ ಮೇಲೆ ದಾಳಿ ನಡೆಸಿ, 25 ಕುರಿಮರಿಗಳನ್ನು ಸಾಯಿಸಿವೆ. ಉಜ್ಜಿನಿ ಗ್ರಾಮದ ಬಿಂಗಿ ಭೀಮಪ್ಪ ಅವರ 14 ಹಾಗೂ ಬಿಂಗಿ ಹನುಮಂತಪ್ಪ ಅವರ 11 ಕುರಿಮರಿಗಳು ಸತ್ತಿವೆ. ಒಂದು ನಾಯಿ ಸಹ ಸಾವನ್ನಪ್ಪಿದೆ. ಇನ್ನು ಐದು ಕುರಿಮರಿಗಳ ಸ್ಥಿತಿ ಚಿಂತಾಜಕನವಾಗಿದೆ ಎಂದು ಹಿರಿಯ ಪಶು ವೈದ್ಯ ಪರೀಕ್ಷಕ ಮಲ್ಲಿಕಾರ್ಜುನ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net