ಉಜ್ಜಿನಿಯಲ್ಲಿ ಶ್ರೀದೇವಿ ಪುರಾಣ ಪ್ರವಚನ ಆರಂಭ

oct 16 kottur 01
ಉಜ್ಜಿನಿಯಲ್ಲಿ ಶ್ರೀಕಾಳಿಕಾ ದೇವಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀಅಮರಶಿಲ್ಪಿ ಜಕಣಚಾರ್ಯ ಕುಶಲಕರ್ಮಿಗಳ ವಿಕಾಸ ಟ್ರಸ್ಟ್ ಹಮ್ಮಿಕೊಂಡಿರುವ ಶ್ರೀದೇವಿ ಪುರಾಣ ಪ್ರವಚಕ್ಕೆ ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಮಾರಪ್ಪ ಚಾಲನೆ ನೀಡಿದರು. ಉಪಾಧ್ಯಕ್ಷೆ ಪುಷ್ಟಾವತಿ ರೇವಣ್ಣ, ವಿ.ಎಸ್.ಎಸ್.ಎನ್.ಅಧ್ಯಕ್ಷ ತಿಮ್ಮಣ್ಣ, ವಿ.ಲೋಕೇಶ, ಡಾ.ನರೇಂದ್ರಗೌಡ ಇದ್ದರು.
Published on

ಕೊಟ್ಟೂರು: ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವದ 44ನೇ ವರ್ಷದ ಅಂಗವಾಗಿ ಉಜ್ಜಿನಿ ಗ್ರಾಮದಲ್ಲಿ ಸೋಮವಾರ ಕಾಳಿಕಾ ದೇವಿಗೆ ವಿಶೇಷ ಅಲಂಕಾರ ಮಾಡಿ, ವನಿತಾ ದೇವಿ ಹಾಗೂ ಆದಿಶಕಿಕ್ತ ದೇವಸ್ಥಾನದವರೆಗೆ ಶೋಭಯಾತ್ರೆ ನಡೆಯಿತು.

ಶ್ರೀದೇವಿ ಪುರಾಣ ಪ್ರವಚ ಭಾನುವಾರ ಸಂಜೆ ಗ್ರಾಪಂ ನೂತನ ಅಧ್ಯಕ್ಷೆ ನಿಂಗಮ್ಮ ಮಾರಪ್ಪ ಅಧಿಕೃತವಾಗಿ ಚಾಲನೆ ನೀಡಿದರು. ಪ್ರವಚನ ಆಕ್ಟೋಬರ್ 25ರಂದು ಮುಕ್ತಾವಾಗಲಿದೆ.

ಹೃದಯರೋಗ ತಜ್ಞ ಡಾ.ನರೇಂದ್ರಗೌಡ ಮಾತನಾಡಿ, ಮನಸ್ಸು ನೆಮ್ಮದಿಗೆ ಆರೋಗಕ್ಕೆ ಪುರಾಣ ಪ್ರವಚನ ತುಂಬ ಆವಶ್ಯ ಎಂದರು.
ಉಪನ್ಯಾಸಕ ಜಗದೀಶ ಚಂದ್ರಬೋಸ್, ಗ್ರಾಪಂ ಉಪಾಧ್ಯಕ್ಷೆ ಪುಷ್ಟಾವತಿ ರೇವಣ್ಣ, ವಿ.ಎಸ್.ಎಸ್.ಎನ್. ಅಧ್ಯಕ್ಷ ತಿಮ್ಮಣ್ಣ, ಶೆಟ್ಟ್ರು ಬಾಬಣ್ಣ, ವಿದ್ವಾನ ಡಾ.ಕೆ.ವೃಷಭೇಂದ್ರಾಚಾರ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net