

ಕೊಟ್ಟೂರು: ಉಜ್ಜಿನಿ ಗ್ರಾಮದಲ್ಲಿ ಒಂದು ಆರ್‌ಒ ಪ್ಲಾಂಟ್ ಹಾಗೂ ಮಿನಿ ಟ್ಯಾಂಕ್‌ನ ಕುಡಿವ ನೀರು ಯೋಗ್ಯವಾಗಿಲ್ಲ ಎನ್ನುವುದು ಜಿಲ್ಲಾ ಕಾಲರಾ ನಿಯಂತ್ರಣ ತಂಡ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಈ ಕುರಿತು ತಂಡ ಶುಕ್ರವಾರ ಗ್ರಾಪಂಗೆ ವರದಿ ನೀಡಿದೆ. ಉಜ್ಜಿನಿ ಸಮೀಪದ ಅರಸನಬಾವಿ ಹತ್ತಿರದ ಶುದ್ಧ ಕುಡಿವ ನೀರಿನ ಘಟಕ ಹಾಗೂ ಮಿನಿ ಟ್ಯಾಂಕ್‌ನ ನೀರು ಕುಡಿಯಲು ಸರಿಯಿಲ್ಲ. ಇಲ್ಲಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್‌ಗಳು ಒಡೆದಿದ್ದರೆ ದುರಸ್ತಿ ಮಾಡಬೇಕು. ಇತರ ನ್ಯೂನತೆಗಳನ್ನು ಸರಿಪಡಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಕೆವಹಿಸಿ ಶುದ್ಧೀಕರಿಸಿದ ಕುಡಿವ ನೀರನ್ನು ಸಾರ್ವಜನಿಕರಿಗೆ ಪೂರೈಸಬೇಕು ಎಂದು ಗ್ರಾಪಂಗೆ ಜಿಲ್ಲಾ ಕಾಲರಾ ನಿಯಂತ್ರಣ ತಂಡ ಸೂಚಿಸಿದೆ.