ಸಕಾರಾತ್ಮಕ ಯೋಚನೆಗಳಿಂದ ನೆಮ್ಮದಿ

Ujjini Dc
ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ದಂಪತಿಯನ್ನು ಸನ್ಮಾನಿಸಲಾಯಿತು. ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು, ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ, ತಹಸೀಲ್ದಾರ್ ಅಮರೇಶ್ವರ ಜಿ.ಕೆ., ದಾವಣಗೆರೆ ಜಿ.ಬಿ. ಇನ್‌ಸೈಟ್ ಐಎಎಸ್ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಇದ್ದರು.
Published on

ಉಜ್ಜಿನಿ: ಪುರಾಣ, ಪ್ರವಚನಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದರು.

ವರಮಹಲಕ್ಷ್ಮೀ ಹಬ್ಬದ ನಿಮಿತ್ತ ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉಡಿ ತುಂಬುವ ಕಾರ್ಯಕ್ರಮದಲ್ಲಿ ದಂಪತಿ ಸಮೇತ ಪಾಲ್ಗೊಂಡ ಅವರು ಮಾತನಾಡಿದರು. ಯಾರೇ ಆಗಲಿ ದ್ವೇಷಕ್ಕೆ ಕಾರಣವಾಗುವ ಬರಹ, ವಿಡಿಯೋ, ಫೋಟೊಗಳನ್ನು ವಾಟ್ಸಾೃಪ್ ಸ್ಟೇಟಸ್‌ನಲ್ಲಿ ಹಾಕಬೇಡಿ. ದ್ವೇಷ ಬಿಟ್ಟು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಜೀವನ ನಡೆಸಬೇಕು.

ಪ್ರವಚನಗಳಲ್ಲಿ ಅನೇಕ ಉಪಕಥೆಗಳನ್ನು ಹೇಳುವ ಮೂಲಕ ಬಾಳಿನ ಪಾಠಗಳನ್ನು ತಿಳಿಸಲಾಗುತ್ತದೆ. ಮನುಷ್ಯ ನಕಾರಾತ್ಮಕ ವಿಚಾರಗಳನ್ನು ಬಿಟ್ಟು ಸಕಾರಾತ್ಮಕ ಯೋಚನೆಗಳನ್ನು ಮಾಡಬೇಕು. ಇದರಿಂದ ಮನಸ್ಸಿಗೆ ನೆಮ್ಮದಿಗೆ ಸಿಗುವುದರ ಜತೆ ಕುಟುಂಬ ಹಾಗೂ ಸಮಾಜಕ್ಕೂ ಒಳಿತಾಗಲಿದೆ. ವರಮಹಲಕ್ಷ್ಮೀ ಪೂಜೆ ಸಕಲರಿಗೂ ಆರೋಗ್ಯ, ನೆಮ್ಮದಿ ನೀಡಲಿ ಎಂದು ಹಾರೈಸಿದರು.

ಸಾನ್ನಿಧ್ಯ ವಹಿಸಿದ್ದ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯರು ಮಾತನಾಡಿ, ಸಕಲ ಜೀವಿಗಳಿಗೂ ಜಗದ್ಗುರು ಮರುಳಾರಾಧ್ಯರು ಒಳಿತು ಮಾಡಲಿ. ಉತ್ತಮ ಮಳೆ ಬಂದು ರೈತರು ಸಮೃದ್ಧ ಬೆಳೆ ಬೆಳೆಯುವಂತಾಗಲಿ. ವರಮಹಲಕ್ಷ್ಮೀ ಪೂಜೆ ಮಹಿಳೆಯರಿಗೆ ಸೌಭಾಗ್ಯವನ್ನು ನೀಡಲಿ ಎಂದು ಆಶೀರ್ವಚನ ನೀಡಿದರು.

ಹರಪನಹಳ್ಳಿ ಶಾಸಕಿ ಎಂ.ಪಿ.ಲತಾ, ತಹಸೀಲ್ದಾರ್ ಅಮರೇಶ್ವರ ಜಿ.ಕೆ., ದಾವಣಗೆರೆ ಜಿ.ಬಿ. ಇನ್‌ಸೈಟ್ ಐಎಎಸ್ ಸಂಸ್ಥೆಯ ನಿರ್ದೇಶಕ ವಿನಯ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net