ನಿಂಬಳಗೆರೆ ಗ್ರಾಮದಲ್ಲಿ ಹೋಳಿಗೆಮ್ಮ ಹಬ್ಬ ಅದ್ದೂರಿ

190722 Nimbalagere Holigemma Habba
ಉಜ್ಜನಿ ಸಮೀಪದ ನಿಂಬಳಗೆರೆ ಗ್ರಾಮದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬದ ಅಂಗವಾಗಿ ಜನರು ಎಡೆ ತೆಗೆದುಕೊಂಡು ಹೋಗುತ್ತಿರುವುದು.
Published on

ಉಜ್ಜಿನಿ: ಸಮೀಪದ ನಿಂಬಳಗೆರೆ ಗ್ರಾಮದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಉತ್ತಮ ಮಳೆ, ಬೆಳೆ ಕರುಣಿಸಲಿ, ಜನ-ಜಾನುವಾರುಗಳಿಗೆ ಯಾವುದೇ ರೋಗ-ರುಜಿನಗಳು ಬಾರದಿರಲಿ ಎಂದು ಪ್ರಾರ್ಥಿಸಿ ಈ ಹಬ್ಬವನ್ನು ಆಚರಣೆ ಮಾಡಲಾಯಿತು.

ಹೋಳಿಗೆಯೊಂದಿಗೆ ಇತರ ಭಕ್ಷ್ಯಗಳನ್ನು ಸಿದ್ಧಪಡಿಸುವ ಮಹಿಳೆಯರು, ಪುಟ್ಟ ಮಡಕೆ, ಅದರಲ್ಲಿ ಬೇವಿನ ಎಲೆಯನ್ನಿರಿಸಿಕೊಂಡು ಗ್ರಾಮದ ಹೊರ ವಲಯಲ್ಲಿನ ಶಾಂತಾನಹಳ್ಳಿ ರಸ್ತೆಯಲ್ಲಿರುವ ಮಾರಮ್ಮ ದೇವಿಯ ಬೇವಿನ ಮರದಡಿ ಎಡೆ ಸಮರ್ಪಿಸಿ ಮನೆಗೆ ಮರಳಿದರು. ಎಡೆ ತೆಗೆದುಕೊಡು ಹೋಗುವಾಗ ಯಾರೊಂದಿಗೂ ಮಾತನಾಡದೇ ಹಿಂದಿನಿಂದಲೂ ಬಂದ ಸಂಪ್ರದಾಯ ಪಾಲಿಸಿದರು. ಹಿಂದು, ಮುಸ್ಲಿಮರು ಸೇರಿ ಎಲ್ಲರ ಮನೆಯಲ್ಲೂ ಇಂದು ಹೋಳಿಗೆ ಮಾಡಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net