ವಿದ್ಯಾರ್ಥಿಗಳು ಗಿಡ-ಮರಗಳನ್ನು ಪೋಷಿಸಲಿ

UJN-1
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಮಾಜಿ ಸಚಿವ ಬಿ.ಶ್ರೀರಾಮುಲು ಉಜ್ಜಿನಿಯ ಶಾಲೆಯಲ್ಲಿ ಗಿಡ ನೆಟ್ಟು, ನೀರುಣಿಸಿದರು. ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ, ಪ್ರಧಾನ ಕಾರ್ಯದರ್ಶಿ ಮಂಜುನಾಥ, ಮುಖಂಡರಾದ ಲೋಕೇಶ, ಮರುಳಸಿದ್ದಪ್ಪ, ಕೊಟ್ರೇಶ ಇತರರಿದ್ದರು.
Published on

ಉಜ್ಜಿನಿ: ಪ್ರಸ್ತುತ ದಿನಗಳಲ್ಲಿ ಪರಿಸರ ಕಲುಷಿತವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಇಲ್ಲಿನ ಜ್ಞಾನಗುರು ವಿದ್ಯಾಸಂಸ್ಥೆಯ ಶ್ರೀ ದಾರುಕ ಹಿ.ಪ್ರಾ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಗಿಡ ನೆಟ್ಟು ಮಾತನಾಡಿದರು.

ಪರಿಸರವಿಂದು ನಾನಾ ಕಾರಣಗಳಿಂದಾಗಿ ಕಲುಷಿತವಾಗುತ್ತಿದ್ದು, ಮುಂದಿನ ತಲೆಮಾರಿನ ಹೊತ್ತಿಗೆ ಅಪಾಯವಾಗುವ ಸಾಧ್ಯತೆಗಳಿವೆ. ಈಗಾಗಲೇ ಪರಿಸರ ಉಳಿವಿಗಾಗಿ ಎಲ್ಲ ದೇಶಗಳು ನಾನಾ ರೀತಿಯ ಯೋಜನೆಗಳನ್ನು ಹಾಕಿಕೊಂಡಿವೆ. ಅವುಗಳ ಪಾಲನೆ ಕಟ್ಟುನಿಟ್ಟಾಗಿ ಆಗಬೇಕಿದೆ. ಪರಿಸರ ಕಾಪಾಡುವುದಕ್ಕಾಗಿ ಪ್ರತಿಯೊಬ್ಬ ನಾಗರಿಕನೂ ಪಣತೊಡಬೇಕು.

ಶಾಲೆಗಳಲ್ಲಿ ಈ ಕುರಿತು ವಿಶೇಷ ಜಾಗೃತಿ ಮೂಡಿಸಬೇಕು. ಮಕ್ಕಳಲ್ಲಿ ಪರಿಸರದ ಮಹತ್ವಗಳನ್ನು ಶಿಕ್ಷಕರು ತಿಳಿಸಿಕೊಡಬೇಕು. ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಸೇರಿ ಇತರೆ ವಸ್ತುಗಳ ಬಳಕೆಯನ್ನು ಸಂಪೂರ್ಣ ನಿಲ್ಲಿಸೋಣ. ವಿದ್ಯಾರ್ಥಿಗಳು ಗಿಡ-ಮರಗಳನ್ನು ಪೋಷಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net