ನ್ಯಾಯಯುತ ಒಳಮೀಸಲಾತಿ ಕಲ್ಪಿಸಿ

Ujjini Celbration
ಉಜ್ಜಿನಿ ಗ್ರಾಮದ ಡಾ.ಅಂಬೇಡ್ಕರ್ ವೃತ್ತದಲ್ಲಿ ದಲಿತಪರ ಸಂಘಟನೆಗಳ ಮುಖಂಡರು ಸಂಭ್ರಮಾಚರಣೆ ಮಾಡಿದರು. ಪ್ರಮುಖರಾದ ಎಚ್.ವಸಂತ್ ಕುಮಾರ್, ರಂಗಪ್ಪ, ಜಿ.ಸಿದ್ದೇಶ್, ಕೊರುವರ ಭೀಮಪ್ಪ, ವೈ. ಸತೀಶ್, ಎಂ.ದುರ್ಗೇಶ್ ಇತರರಿದ್ದರು.
Published on

ಉಜ್ಜಿನಿ: ಎಸ್ಸಿ-ಎಸ್ಟಿ ಒಳಮೀಸಲಾತಿ ಪರ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ ಕಾರಣ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ದಲಿತ ಪರ ಸಂಘಟನೆಗಳ ಮುಖಂಡರು ಸೋಮವಾರ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಡಾ.ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್.ವಸಂತ್ ಕುಮಾರ್ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪು 30 ವರ್ಷದ ಹೋರಾಟಕ್ಕೆ ಸಂದ ಫಲವಾಗಿವಾಗಿದೆ. ಪರಿಶಿಷ್ಟ ಜಾತಿಯಲ್ಲಿ ನೂರಕ್ಕೂ ಹೆಚ್ಚು ಪಂಗಡಗಳಿದ್ದು, ಇದರಲ್ಲಿ ಅರ್ಹರಿಗೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ.

ಸರ್ಕಾರ ಮೀಸಲಾತಿಯಲ್ಲಿ ನ್ಯಾಯಯುತವಾಗಿ ವರ್ಗೀಕರಿಸಿ ಒಳಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಟಿ.ಪಿ.ರಂಗಪ್ಪ, ಸುರೇಶ್ ಮಾತನಾಡಿದರು. ಪ್ರಮುಖರಾದ ಜಿ.ಸಿದ್ದೇಶ್, ಕೊರುವರ ಭೀಮಪ್ಪ, ವೈ. ಸತೀಶ್, ಎಂ.ದುರ್ಗೇಶ್, ಎಂ.ಮಾರ್ಕಂಡಪ್ಪ. ಎಂ.ಮೈಲಪ್ಪ, ಗುರುಬಸಣ್ಣ, ಮುಪ್ಪಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net