ಕಾರು ಪಲ್ಟಿಯಾಗಿ ಶಿಕ್ಷಕ ಸಾವು

Kottur Car Accident
ಉಜ್ಜಿನಿ ಗ್ರಾಮದ ಸರ್ಕಾರಿ ಆಸ್ಪತ್ರೆ ಬಳಿಯ ನೀರಿನ ಗುಂಡಿಗೆ ಬಿದ್ದಿರುವ ಕಾರು. ಶಿಕ್ಷಕ ಕೆ.ಎಂ.ಪ್ರಕಾಶ
Published on

ಕೊಟ್ಟೂರು/ಉಜ್ಜಿನಿ: ಗ್ರಾಮದ ಸರ್ಕಾರಿ ಆಸ್ಪತ್ರೆ ಮುಂದೆ ಭಾನುವಾರ ಕಾರು ರಸ್ತೆ ಪಕ್ಕದ ನೀರಿನ ಗುಂಡಿಗೆ ಪಲ್ಟಿಯಾಗಿದ್ದರಿಂದ ಶಿಕ್ಷಕ ಕೆ.ಎಂ.ಪ್ರಕಾಶ(55) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಕೆ.ಎಂ.ಪ್ರಕಾಶ ಕೊಟ್ಟೂರು ಪಟ್ಟಣದ ಶ್ರೀಗುರು ಕೊಟ್ಟೂರೇಶ್ವರ ಪ್ರೌಢಶಾಲೆಯ ಶಿಕ್ಷಕರಾಗಿದ್ದರು. ಜಗಳೂರು ತಾಲೂಕು ಹೊಸಕೆರೆಯಿಂದ ಉಜ್ಜಿನಿ ಮಾರ್ಗವಾಗಿ ಕೊಟ್ಟೂರಿಗೆ ಕಾರಿನಲ್ಲಿ ತಂದೆ ಶರಣಯ್ಯ, ತಾಯಿ ಸುವರ್ಣ ಅವರೊಂದಿಗೆ ಬರುತ್ತಿದ್ದಾಗ ಎದುರಿಗೆ ಬಂದ ನಾಯಿ ಉಳಿಸಲು ಹೋಗಿ ಪಲ್ಟಿಯಾಗಿದೆ. ರಸ್ತೆಪಕ್ಕದ ನೀರಿನ ಗುಂಡಿಗೆ ಬಿದ್ದಿರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಆಶ್ಚರ್ಯಕರ ರೀತಿಯಲ್ಲಿ ತಂದೆ-ತಾಯಿ ಪಾರಾಗಿದ್ದಾರೆ. ಮೃತನ ಅಣ್ಣ ಕೆ.ಎಂ.ವೀರಭದ್ರಯ್ಯ ನೀಡಿದ ದೂರಿನ ಮೇರೆಗೆ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net