ವೀರಶೈವ ಧರ್ಮದಿಂದ ಶಿಕ್ಷಣಕ್ಕೆ ಹೊಸ ಭಾಷ್ಯ

Ujjini Lakshadeepotsav Programme
ಉಜ್ಜಿನಿ ಸದ್ಧರ್ಮ ಪೀಠದಲ್ರ್ ಲಿಂ. ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 13ನೇ ವರ್ಷದ ಸಂಸ್ಮರಣೋತ್ಸವ ಮತ್ತು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಉಜ್ಜಿನಿ ಜಗದ್ಗುರುಗಳು, ಕಲ್ಯಾಣ ಸ್ವಾಮೀಜಿ, ಪ್ರಶಾಂತ ಸಾಗರ ಶಿವಾಚಾರ್ಯರು, ವರಸದೊ್ಯೀೀಜಾತರು, ಮಹೇಶ್ವರ ಸ್ವಾಮೀಜಿ, ಶಾಸಕರಾದ ದೇವೇಂದ್ರಪ್ಪ, ಲತಾ ಮಲ್ಲಿಕಾರ್ಜುನ್, ಡಿ.ಜಿ. ಶಾಂತನಗೌಡ. ವಿಧಾನ ಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಇತರರಿದ್ದರು.
Published on

ಉಜ್ಜಿನಿ: ಸದಾ ಜಾತ್ಯತೀತ-ಧರ್ಮಾತೀತವಾಗಿ ಸರ್ವರನ್ನು ಏಕಮನೋಭಾವದಿಂದ ಪರಿಗಣಿಸುತ್ತ ಬಂದಿರುವ ವೀರಶೈವ ಧರ್ಮದ ಪಂಚಪೀಠಗಳು ನಾಡಿನ ಶಿಕ್ಷಣ ಮತ್ತು ಅನ್ನ ದಾಸೋಹಕ್ಕೆ ನಿರಂತರವಾಗಿ ಬೆಂಬಲವಾಗಿ ನಿಂತಿರುವುದು ಮಾದರಿ ಎಂದು ವಿಧಾನ ಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.

ಉಜ್ಜಿನಿ ಸದ್ಧರ್ಮ ಪೀಠದಲ್ಲಿ ಶನಿವಾರ ರಾತ್ರಿ ಲಿಂ.ಜಗದ್ಗುರು ಮರುಳಸಿದ್ಧ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 13ನೇ ವರ್ಷದ ಸಂಸ್ಮರಣೋತ್ಸವ ಮತ್ತು ಲಕ್ಷದೀಪೋತ್ಸವ ಹಿನ್ನೆಲೆಯಲ್ಲಿ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು. ಲಿಂಗೈಕ್ಯ ಜಗದ್ಗುರುಗಳು ಸದಾ ಭಕ್ತರ ಪ್ರೇಮಿಯಾಗಿ ಸದ್ಧರ್ಮ ಪೀಠವನ್ನು ಅಭಿವೃದ್ಧಿಗಾಗಿ ಜೀವನ ಮೀಸಲಿಟ್ಟಿದ್ದರು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಜಯ ಎಂಬ ಸಂದೇಶ ಸಾರಿರುವ ಪಂಚ ಪೀಠಾಚಾರ್ಯರು ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ ವ್ಯಕ್ತವಾಗುತ್ತದೆ. ಸರ್ವರಲ್ಲಿ ಸಮಾನ ಭಾವ ಹೊಂದಿ, ಎಲ್ಲರನ್ನೂ ಸದಾ ಜತೆಯಲ್ಲಿ ಕರೆದುಕೊಂಡು ಹೋಗುವ ವೀರಶೈವ ಧರ್ಮವು ನಾಡಿನ ಶೈಕ್ಷಣಿಕ ಮತ್ತು ಅನ್ನದಾಸೋಹಕ್ಕೆ ಹೊಸ ಭಾಷ್ಯ ಬರೆದಿದೆ ಎಂದರು.

ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವುದರ ಜೊತೆಗೆ ಅಜ್ಞಾನವನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಪಸರಿಸುವುದೇ ಲಕ್ಷದೀಪೋತ್ಸವದ ಸಂದೇಶ ಎಂದರು.ಹೊನ್ನಾಳಿ ಶಾಸಕ ಡಿ.ಜಿ ಶಾಂತನಗೌಡ ಮಾತನಾಡಿ, ಪಂಚ ಪೀಠಗಳಿಗೆ ಸಂಬಂದಿಸಿದಂತೆ ನಾಲ್ಕು ಮಠಗಳು ಹೊನ್ನಾಳಿ ಕ್ಷೇತ್ರದಲ್ಲಿರುವುದು ಹೆಮ್ಮೆಯ ವಿಷಯ ಎಂದರು. ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ಸರ್ವರ ಬದುಕಿನಲ್ಲಿ ಬದಲಾವಣೆ ಮಹಾ ಪರ್ವ ಬರುತ್ತೆ. ಇದಕ್ಕೆ ಸ್ವಾಮೀಜಿಗಳ ಆಶೀರ್ವಾದ ಮುಖ್ಯ. ಉತ್ತಮ ಅವಕಾಶ ಬಂದಾಗ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.

ವರಸದ್ಯೋಜಾತ, ನಂದಿಪುರ ಮಹೇಶ್ವರ ಸ್ವಾಮೀಜಿ ಮಾತನಾಡಿದರು. 20ಕ್ಕೂ ಹೆಚ್ಚು ಶಿವಾಚಾರ್ಯರು ಭಾಗವಹಿಸಿದ್ದರು ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಹಕಾರ ರತ್ನ ಪ್ರಶಸ್ತಿ ವಿಜೇತ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ ತಿಪ್ಪೇಸ್ವಾಮಿ, ಉಪಾಧ್ಯಕ್ಷ ಐ ದಾರುಕೇಶ್, ಕೊಟ್ಟೂರು ಪಪಂ ಮಾಜಿ ಉಪಾಧ್ಯಕ್ಷ ಸಿದ್ದಲಿಂಗನಗೌಡ ಮತ್ತಿತರರನ್ನು ಸನ್ಮಾನಿಸಲಾಯಿತು. ಮುಖಂರಾದ ಎಂ.ಗುರುಸಿದ್ದನಗೌಡ, ಉಜ್ಜಿನಿ ಲೋಕಪ್ಪ, ಗ್ರಾಪಂ ಅಧ್ಯಕ್ಷೆ ನಿಂಗಮ್ಮ, ಅರವಿಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net