ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಿ

UJJNI1
ಉಜ್ಜಿನಿ ಗ್ರಾಮದ ಸದ್ಧರ್ಮ ಯಾತ್ರಿ ನಿವಾಸದಲ್ಲಿ ವಿಶ್ವ ಛಾಯಾಗ್ರಾಹಣ ದಿನಾಚರಣೆ ಕಾರ್ಯಕ್ರಮವನ್ನು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ತರಿಕೆರೆ ಛಾಯಾಗ್ರಹಕರ ಸಂಘದ ಅಧ್ಯಕ್ಷ ಕೆ.ಭವಾನಿಶಂಕರ್, ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಟ್ರಸ್ಟ್ ಅಧ್ಯಕ್ಷ ಕೆ.ಜಿ.ಕೊಟ್ರೇಶ್ ಇನ್ನಿತರರಿದ್ದರು.
Published on

ಉಜ್ಜಿನಿ: ಛಾಯಾಗ್ರಾಹಕರು ಹೊಸ ತಂತ್ರಜ್ಞಾನ ಅಳಡಿಸಿಕೊಂಡಾಗ ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದು ಉಜ್ಜಿನಿ ಸದ್ಧರ್ಮ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಸದ್ಧರ್ಮ ಯಾತ್ರಿ ನಿವಾಸದಲ್ಲಿ ಕೊಟ್ಟೂರು ತಾಲೂಕು ಶ್ರೀಗುರು ಬಸವೇಶ್ವರ ಫೋಟೊ ಮತ್ತು ವಿಡಿಯೋಗ್ರಾಫರ್ಸ್ ಟ್ರಸ್ಟ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಭೆ ಸಮಾರಂಭಗಳಲ್ಲಿ ಹೆಚ್ಚಾಗಿ ಯುವ ಪೋಟೋಗ್ರಾಫರ್ಸ್ ಕಾಣಿಸಿಕೊಳ್ಳುತ್ತಿದ್ದಾರೆ. ಛಾಯಾಗ್ರಹಣ ಕೆಲವರಿಗೆ ಹವ್ಯಾಸವಾಗಿದ್ದರೆ, ಕೆಲವರಿಗೆ ಕೆಲಸ ನೀಡುತ್ತಿದೆ. ಛಾಯಾಗ್ರಾಹಕರು ವೃತ್ತಿಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಕೊಟ್ಟೂರು ತಾಲೂಕು ಛಾಯಾಗ್ರಹಕರು ತೊಡಗಿಸಿಕೊಳ್ಳುತ್ತಿರುವುದು ಪ್ರಶಂಸನೀಯ ಎಂದರು.

ತರಿಕೆರೆ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಕೆ.ಭವಾನಿಶಂಕರ್ ಮಾತನಾಡಿದರು. ಬೆಂಗಳೂರಿನ ಪವನ್ ಕುಮಾರ್ ಫೋಟೋ ಎಡಿಟಿಂಗ್ ಕುರಿತು ತರಬೇತಿ ನೀಡಿದರು. ಟ್ರಸ್ಟ್ ಅಧ್ಯಕ್ಷ ಕೆ.ಜಿ.ಕೊಟ್ರೇಶ್, ವಿಜಯನಗರ ಜಿಲ್ಲಾಧ್ಯಕ್ಷ ಕರಿಬಸವರಾಜ, ಜಿಲ್ಲೆಯ ಎಲ್ಲ ತಾಲೂಕು ಸಂಘಗಳ ಪದಾಧಿಕಾರಿಗಳು, ಛಾಯಾಗ್ರಾಹಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net