ಭಾನುವಾರದಿಂದ ಬೆಂಗಳೂರಿನಲ್ಲಿ ಉಜ್ಜಯಿನಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮಾವೇಶ

ujja
Published on

ಬೆಂಗಳೂರು: ಆಷಾಡ ಮಾಸದ ಅಂಗವಾಗಿ ಉಜ್ಜಯಿನಿ ಜಗದ್ಗುರು ಶ್ರೀಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರ 11ನೇ ವರ್ಷದ ಇಷ್ಟಲಿಂಗ ಮಹಾಪೂಜೆ ಮತ್ತು ಸದ್ಧರ್ಮ ಜಾಗೃತಿ ಸಮಾವೇಶವು ಜು.13, 14ಕ್ಕೆ (ಭಾನುವಾರ ಮತ್ತು ಸೋಮವಾರ) ಹಮ್ಮಿಕೊಳ್ಳಲಾಗಿದೆ.

ಉಜ್ಜಯಿನಿ ಜಗದ್ಗುರು ಪೂಜಾ ಸಮಿತಿ ಆಯೋಜಿಸಿರುವ ಕಾರ್ಯಕ್ರಮವು ಬಸವನಗುಡಿಯ ದೊಡ್ಡ ಬಸವಣ್ಣ ದೇವಾಲಯದ ಮುಂಭಾಗ ಇರುವ ನಿಜಗುಣ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಪೂಜಾ ಸಮಿತಿ ಅಧ್ಯಕ್ಷರಾದ ಷಡಕ್ಷರ ಶಾಸಿಗಳು ತಿಳಿಸಿದ್ದಾರೆ.

ಭಾನುವಾರ ಬೆಳಗ್ಗೆ 8 ಗಂಟೆಗೆ ಆಗಮಿಸುವ ಜಗದ್ಗುರುಗಳು ಸಕಲ ಮಂಗಳವಾದ್ಯಗಳೊಂದಿಗೆ ಸ್ವಾಗತಿಸಲಾಗುವುದು. ನಂತರ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಲಿದೆ. ಸಂಜೆ 6 ಗಂಟೆಗೆ ಜನಜಾಗೃತಿ ಧರ್ಮ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ವಿ.ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾಜಾಪುರ, ನಾಗಲಾಪುರ, ಬೆಳ್ಳಾವಿ ಮತ್ತು ಚಿಕ್ಕಕಲ್ಲುಬಾಳು ಮಠದ ಶ್ರೀಗಳು ಆಗಮಿಸಲಿದ್ದಾರೆ.

ಜು.14ರಂದು ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಮತ್ತು ಸಂಜೆ 6 ಗಂಟೆಗೆ ಸಮಾರೋಪ ಸಮಾವೇಶ ನಡೆಯಲಿದೆ. ಶಿವಗಂಗೆ ಮತ್ತು ವಿಭೂತಿಪುರ ಮಠದ ಶ್ರೀಗಳು ಆಗಮಿಸಲಿದ್ದು, ಶಾಸಕ ರವಿ ಸುಬ್ರಮಣ್ಯ ಸೇರಿದಂತೆ ಹಲವು ನಾಯಕರು, ವಿವಿಧ ಕ್ಷೇತ್ರದ ಗಣ್ಯರು ಎರಡು ದಿನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net