

ಕೊಟ್ಟೂರು: ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ದಾವಣಗೆರೆ ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್‌ನಲ್ಲೇ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಪಾಲನಾಯಕನಕೋಟೆ ಗ್ರಾಮದ ಹಂಪಮ್ಮ, ಗಂಡು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಉಜ್ಜಯಿನಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ಹೆರಿಗೆ ಮಾಡುವುದು ಕಷ್ಟ ಹಾಗೂ ಪ್ರಸೂತಿ ತಜ್ಞರಿಲ್ಲವೆಂದು ವೈದ್ಯರು ಆಂಬುಲೆನ್ಸ್‌ನಲ್ಲಿ ದಾವಣಗೆರೆಗೆ ಕಳಿಸಿದ್ದಾರೆ. ಹೊಸಕೆರೆ ಸಮೀಪ ನೋವು ಹೆಚ್ಚಾಗಿದೆ. ಈ ವೇಳೆ ಆರೋಗ್ಯ ಸಹಾಯಕಿ ನಾಗವೇಣಿ, ಚಾಲಕ ಕೊಟ್ರೇಶಪ್ಪನ ಸಹಾಯ ಪಡೆದು ಹೆರಿಗೆ ಮಾಡಿಸಿದ್ದು, ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ. ಸದ್ಯ ಅವರನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.