

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಮಹಾರಾಷ್ಟçದ ಉಜಿನಿ ಜಲಾಶಯದಿಂದ ೧.೫ ಲಕ್ಷ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ.ಇದರಿಂದಾಗಿ ಕಲಬುರಗಿ,ವಿಜಯಪುರ ಮತ್ತು ಯಾದಗಿರಿ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಇದರಿಂದಾಗಿ ಮತ್ತೊಮ್ಮೆ `ಮಹಾ' ಪ್ರವಾಹ ಬರುವ ಸಾಧ್ಯತೆ ನಿರ್ಮಾಣಗೊಂಡಿದೆ.
ಜಿಲ್ಲೆಯಲ್ಲಿ ಕಳೆದ ೧೨ ದಿನಗಳಿಂದ ನಿರಂತರವಾಗಿ ಮಳೆ ಬರುತ್ತಿದೆ. ಅದರ ಜತೆಗೆ ಮಹಾರಾಷ್ಟçದಲ್ಲಿ ಮಳೆ ಹೆಚ್ಚಾಗಿದ್ದರಿಂದ ಅಲ್ಲಿನ ಉಜನಿ ಜಲಾಯಶ ತುಂಬಿದ್ದರಿAದ ಸಿಕ್ಕಾಪಟ್ಟೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಗುರುವಾರ ಸಂಜೆ ಹೊತ್ತಿಗೆ ಉಜನಿಯಿಂದ ೧.೫೫ ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಜನಿ ನೀರು ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್‌ಗೆ ಬಂದು ಸೇರುತ್ತಿದೆ. ಹೀಗಾಗಿ ಸೊನ್ನ ಬ್ಯಾರೇಜ್‌ಗೆ ೮೪ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಮುಂಜಾಗ್ರತೆಯಾಗಿ ಬ್ಯಾರೇಜ್‌ನಿಂದ ೮೮ ಸಾವಿರ ಕ್ಯೂಸೆಕ್ ನೀರನ್ನು ಆರು ಗೇಟುಗಳನ್ನು ತೆರೆದು ಭೀಮಾ ನದಿಗೆ ಹರಿಸಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.
೧.೫೦ ಲಕ್ಷ ಕ್ಯೂಸೆಕ್ ನೀರು ಹರಿದು ಬಂದರೂ ಭೀಮಾದಲ್ಲಿ ಪ್ರವಾಹ ಕಾಣಿಸಿಕೊಳ್ಳುವುದಿಲ್ಲ. ಆದರೆ, ಈ ಪ್ರಮಾಣ ಇನ್ನೂ ಹೆಚ್ಚಳಗೊಂಡರೆ ಭೀಮಾ ತೀರದಲ್ಲಿರುವ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ ತಾಲೂಕಿನ ೧೧೬ ಹಳ್ಳಿಗಳಿಗೆ ಭೀಮೆ ನುಗ್ಗುವ ಸಾಧ್ಯತೆ ಇದೆ.
ಮಣ್ಣೂರ ಹೊರ ವಲಯದಲ್ಲಿರುವ ಸುಕ್ಷೇತ್ರ ಯಲ್ಲಮ್ಮ ದೇವಿ ದೇವಾಲಯಕ್ಕೆ ಹೋಗುವ ಸೇತುವೆ ನೀರಿನಲ್ಲಿ ಮುಳುಗ ಹಂತದಲ್ಲಿದೆ. ಘತ್ತರಗಿ,ದೇವಲಗಾಣಗಾಪುರ ಸೇತುವೆಗಳಲ್ಲಿ ನೀರು ಅಪಾಯ ಮಟ್ಟದಲ್ಲಿ ಹರಿಯಲು ಶುರುವಾಗಿದೆ.