ಅರಿಯಪ್ಪಾಡಿಯಲ್ಲಿ ಉಗ್ರಾಣ ಮುಹೂರ್ತ

Bdk_Ugrana
Published on

ಬದಿಯಡ್ಕ: ಮುಂಡಿತ್ತಡ್ಕ ಸಮೀಪದ ಅರಿಯಪ್ಪಾಡಿ ವಾಡದ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾ ದಿನ ಹಾಗೂ ದೈವಗಳ ನೇಮ ಮಂಗಳವಾರದಿಂದ ಆರಂಭಗೊಂಡಿದ್ದು, ಮಾಡದ ಮಹಾದ್ವಾರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬಳಿಕ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ನೇತೃತ್ವದಲ್ಲಿ ಗಣಪತಿ ಹವನ, ಉಗ್ರಾಣ ಮುಹೂರ್ತ, ಶ್ರೀ ದೈವಗಳ ಮಹಾ ತಂಬಿಲ ಜರಗಿತು. ಈರ್ವರು ಉಳ್ಳಾಕ್ಲು ಮಹಿಳಾ ಭಜನಾ ಸಂದ ಉದ್ಘಾಟನೆ ಹಾಗೂ ಭಜನಾ ಸಂಕೀರ್ತನೆ ಜರಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net