ಏ.12 ರಂದು ಸಂಜೆ 6 ಗಂಟೆಗೆ ಉಗ್ರ ಹನುಮಾನ ರಥೋತ್ಸವ

Talikote, Rathotsav, Hanuman,
Published on

ನಾಳೆ

ಕಲಬುರಗಿ : ನಗರದ ಜೇವರ್ಗಿ ರಸ್ತೆಯ ಎನ್‌ಜಿಒ ಕಾಲನಿಯಲ್ಲಿರುವ ಜೈ ಉಗ್ರ ಹನುಮಾನ ದೇವಾಲಯ ರಥೋತ್ಸವ ಏ.೧೨ ರಂದು ಸಂಜೆ ೬ ಗಂಟೆಗೆ ಜರುಗಲಿದೆ ಎಂದು ಜೈ ಉಗ್ರ ಹನುಮಾನ ಸೇವಾ ಸಮಿತಿ ಅಧ್ಯಕ್ಷ ರುದ್ರಗೌಡ ಪಾಟೀಲ್, ಉಪಾಧ್ಯಕ್ಷ ಹನುಮಂತರಾಯಗೌಡ ಪಾಟೀಲ್ ಮತ್ತು ಕಾರ್ಯದರ್ಶಿ ಬಸವರಾಜ ಬಿರಾದಾರ ಸೊನ್ನ ತಿಳಿಸಿದ್ದಾರೆ. ಅಂದು ಬೆಳಗ್ಗೆ ೫-೪೫ಕ್ಕೆ ಹನುಮಾನ ತೊಟ್ಟಿಲೋತ್ಸವ, ೮ ಗಂಟೆಗೆ ಸುಮಂಗಲಿಯರಿAದ ಅಂಭಾ ಭವಾನಿ ದೇವಾಲಯದವರೆಗೂ ಮೆರವಣಿಗೆ ನಂತರ ಕಳಸಾರೋಹಣ ನಡೆಯಲಿದೆ.ಪುರವಂತರ ಪೂಜೆ ಬಳಿಕ ರಥೋತ್ಸವ ನಡೆಯುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸುವಂತೆ ಕೋರಿದ್ದಾರೆ.

==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net