ಉಗಮ ವಿದ್ಯಾರ್ಥಿಗಳಿಗೆ ಸನ್ಮಾನ

Published on

ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ್ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಇತ್ತೀಚೆಗೆ ಕ್ಯಾಂಪಸ್ ಸಂದರ್ಶನದಲ್ಲಿ ನೇಮಕವಾದ ವಿದ್ಯಾರ್ಥಿಗಳ ಪ್ಲೇಸಮೆಂಟ್ ಸೆಲೆಬ್ರೇಶನ್ "ಉಗಮ' ಕಾರ್ಯಕ್ರಮವನ್ನು ಮೇ 30ರಂದು ಬೆಳಗ್ಗೆ 9.30ಕ್ಕೆ ನಗರದ ಆರ್ ಎನ್ ಎಸ್ ಗ್ರಾಂಡ್ ನಲ್ಲಿ ಏರ್ಪಡಿಸಲಾಗಿದೆ.

ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಅತಿಥಿಯಾಗಿ ಪಾಲ್ಗೊಳ್ಳುವರು. ಬಿಸಿಎ ವಿಭಾಗದ ಮುಖ್ಯಸ್ಥ ಸಿದ್ಧಲಿಂಗಪ್ಪ ಕಡಕೋಳ ಅಧ್ಯತೆ ವಹಿಸುವರು.
ಎಕ್ಸೆಂಚರ್, ಎಲ್ಟಿಐ, ಮೈಂಡ್ ಟ್ರೀ, ಇನ್ಫೋಸಿಸ್, ವಿಪ್ರೋ, ಕಾಗ್ನಿಜೆಂಟ್, ಸಿಡಿಡಬ್ಲು, ಡೆಲಾಯಿಟ್, ಐಡಿಎಫ್ ಸಿ, ಟಾಟಾ, ಡಿಜಿಟೆಕ್, ಎವಿಜನ್ ಟೆಕ್ನಾಲಜಿ ಮಂತಾದ ಕಂಪನಿಗಳಲ್ಲಿ ಪ್ಲೇಸಮೆಂಟ್ ಆಗಿರುವಂತ ಮಹಾವಿದ್ಯಾಲಯದ 236ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು.
ವರ್ಷದ ಅತ್ಯುತ್ತಮ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net