ಗುಳೇದಗುಡ್ಡದಲ್ಲಿ ಯುಗಾದಿ ಭವಿಷ್ಯ ಇಂದು

Ugadi prediction today in Guledagudda
Ugadi prediction today in Guledagudda
Published on

ಗುಳೇದಗುಡ್ಡ: ಭವಿಷ್ಯ ತಿಳಿದುಕೊಳ್ಳುವ ಕುತೂಹಲ ಮಾನವನ ಸಹಜ ಗುಣ. ನಕ್ಷತ್ರಗಳ ಲೆಕ್ಕಹಾಕಿ, ವ್ಯಕ್ತಿಗಳ ಮುಖ, ಕೈ ನೋಡಿ.. ಹೀಗೆ ಹಲವಾರು ವಿಧಾನದಲ್ಲಿ ಭವಿಷ್ಯ ಹೇಳುವುದು ರೂಢಿ. ಆದರೆ, ಗುಳೇದಗುಡ್ಡ ನಗರದಲ್ಲಿ ಯುಗಾದಿ ಪಾಡ್ಯದಂದು ಮಳೆ-ಬೆಳೆ, ವ್ಯವಹಾರ, ವ್ಯವಸಾಯ ವರ್ಷದ ಭವಿಷ್ಯ ಹೇಳುವ ಸಂಪ್ರದಾಯವಿದೆ.

ಕಳೆದ ಮೂವತ್ತೈದಕ್ಕೂ ಹೆಚ್ಚು ವರ್ಷಗಳಿಂದ ನಗರದ ಇಲಾಳ ನಾಟ್ಯ ಸಂಘದವರು ಯುಗಾದಿ ಲಭವಿಷ್ಯ ನಡೆಸಿಕೊಂಡು ಬರುತ್ತಿದ್ದಾರೆ. ಯುಗಾದಿ ಅಮಾವಾಸ್ಯೆಯಂದು ರಾತ್ರಿ ಮರಳು ಹಾಕಿ, ಚೌಕಾಕಾರದ ಸಜ್ಜಿಕೆ ನಿರ್ಮಿಸಿ ಅದರ ಸುತ್ತಲೂ ಜೋಳದ ದಂಟುಗಳನ್ನು ನೆಡುತ್ತಾರೆ. ಈ ಚೌಕಟ್ಟಿನ ಒಳಗೆ ಮಣ್ಣಿನಿಂದ ಮಾಡಿದ ಈಶ್ವರ, ಬಸವಣ್ಣ, ಹೊಲ ಊಳುತ್ತಿರುವ ರೈತನ ಮೂರ್ತಿಯನ್ನು ಇಡುತ್ತಾರೆ. ಬಸವಣ್ಣನ ಮುಂದೆ ಹಾಗೂ ಚೌಕಟ್ಟಿನ ನಾಲ್ಕೂ ದಿಕ್ಕಿನಲ್ಲಿ ಅನ್ನದ ಬುತ್ತಿ ಇಡುತ್ತಾರೆ. ಅಲ್ಲದೆ ಇಲ್ಲಿ ವಿವಿಧ ಬಟ್ಟೆಯ ತುಂಡುಗಳನ್ನು ಹಾಕಿರುತ್ತಾರೆ. ಮರುದಿನ ಯುಗಾದಿ ಪಾಡ್ಯದಂದು ನಸುಕಿನಲ್ಲಿ ವರ್ಷದ ಲಭವಿಷ್ಯ ಹೇಳಲಾಗುತ್ತದೆ.

ಒಂದು ವರ್ಷದ ಹಿಂಗಾರು, ಮುಂಗಾರಿನ ಮಳೆ-ಬೆಳೆ, ವರ್ಷದಲ್ಲಿ ನಡೆಯವ ಬಟ್ಟೆ, ಕಾಳು ಕಡಿ ವ್ಯಾಪಾರ ಹಾಗೂ ರಾಜಕೀಯ ಭವಿಷ್ಯವನ್ನೂ ಹೇಳಲಾಗುತ್ತದೆ. ಈ ಯುಗಾದಿ ಲಭವಿಷ್ಯವನ್ನು ಕೇಳಲು ನೂರಾರು ಸಂಖ್ಯೆಯ ಜನರು ನಸುಕಿನಲ್ಲಿಯೇ ಇಲ್ಲಿ ಸೇರುತ್ತಾರೆ. ಈ ವರ್ಷ ಮಾ.30ರಂದು ಬೆಳಗ್ಗೆ 6 ಗಂಟೆಗೆ ಗುಳೇದಗುಡ್ಡ ಮಾರವಾಡಿ ಸಮಾಜದ ಬಗೀಚ್‌ನಲ್ಲಿ 2025 ಯುಗಾದಿ ವರ್ಷದ ಲಭವಿಷ್ಯ ಹೇಳುವ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net