ಗ್ರಾಮೀಣ ಕ್ರಿಯಾತ್ಮಕ ರಂಗ ಕೇಂದ್ರದ ಯುಗಾದಿ ನಾಟಕೋತ್ಸವ

Grameena_Ranga_Kendra
Published on

ತುಮಕೂರು: ಗ್ರಾಮೀಣ ಕ್ರಿಯಾತ್ಮಕ ರಂಗ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ.22 ರಿಂದ 26 ರವರೆಗೆ 5 ದಿನಗಳ ಯುಗಾದಿ ನಾಟಕೋತ್ಸವ&-2025 ಅನ್ನು ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

22 ರಂದು ಸಂಜೆ 6.30ಕ್ಕೆ ಯುಗಾದಿ ನಾಟಕೋತ್ಸವಕ್ಕೆ ಚಾಲನೆ ನೀಡಲಾಗುವುದು. ಹರಿಕಥಾ ವಿದ್ವಾನ್​ ಡಾ.ಲಕ್ಷ್ಮಣದಾಸ್​ ಅಧ್ಯಕ್ಷತೆ ವಹಿಸಲಿದ್ದು ಹಿರಿಯ ರಂಗಕರ್ಮಿ ಶ್ರೀನಿವಾಸ್​ ಜಿ.ಕಪ್ಪಣ್ಣ ಉದ್ಘಾಟಿಸುವರು. ಸಂಗೀತ ಮತ್ತು ನೃತ್ಯ ಅಕಾಡೆಮಿ ರಿಜಿಸ್ಟಾರ್​ ಎನ್​.ನರೇಂದ್ರ ಬಾಬು, ರಂಗಕರ್ಮಿ ಡಾ.ಸಿ.ಬಸವಲಿಂಗಯ್ಯ, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್​.ಕೆ.ಮಿರ್ಜಿ, ಪತ್ರಕರ್ತ ಕೆ.ಜಿ.ಮರಿಯಪ್ಪ, ಆರತಿ ಪಟ್ರಮೆ ಉಪಸ್ಥಿತರಿರುವರು.

ಸಂಜೆ 7ಕ್ಕೆ ವೀರಗಾಸೆ ನೃತ್ಯ ಮತ್ತು ಚಿಟ್ಟಿಮೇಳ ಹಾಗೂ ಮಕ್ಕಳ ಭರತನಾಟ್ಯ, ಸಂಜೆ 7.30ಕ್ಕೆ ರಂಗ ಸೊಗಡು ಸಿದ್ದರಾಜು ಸ್ವಾಂದೇನಹಳ್ಳಿ ನೇತೃತ್ವದಲ್ಲಿ ಪಾವಗಡ ತಾಲೂಕು ವೀರಗೊಂದಿಯ ಶ್ರೀ ಕರಡಿ ಬುಳ್ಳಪ್ಪ ಸಾಂಸ್ಕತಿಕ ಸೇವಾ ಟ್ರಸ್ಟ್​ನ ತಂಡದಿಂದ ದ್ರೌಪದಿಯ ವಸ್ತ್ರಾಪಹರಣ ಅಥವಾ ದುಶ್ಯಾಸನನ ವಧೆ ನಾಟಕ ಪ್ರದರ್ಶನಗೊಳ್ಳಲಿದೆ.

23ರ ಸಂಜೆ 6.30ಕ್ಕೆ ಜಾನಪದ ಗೀತ ಗಾಯನ, ಸಂಜೆ 7.30ಕ್ಕೆ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದಿಂದ ನಿರ್ದೇಶಕ ಕಾಂತರಾಜು ಕೌತುಮಾರನಹಳ್ಳಿ ನಿರ್ದೇಶನದಲ್ಲಿ ಸುಯೋಧನ ನಾಟಕವನ್ನು ಪ್ರರ್ದಶಿಸುವರು.

24 ರ ಸಂಜೆ 6.30ಕ್ಕೆ ತತ್ವಪದ ಗಾಯನ ಬಳಿಕ ಸಂಜೆ 7ಕ್ಕೆ ಅನುರಾಗ್​ ಭೀಮಸಂದ್ರ ನಿರ್ದೇಶನದಲ್ಲಿ ಕಲಾಕಲ್ಪಂ ತಂಡದಿಂದ "ಸೋರುತಿಹುದು ಸಂಬಂಧ' ನಾಟಕ ಪ್ರದರ್ಶನಗೊಳ್ಳಲಿದೆ. 25ರಂದು ಸಂಜೆ 6.30ಕ್ಕೆ ಪರಿಸರ ಗೀತೆಗಳ ಗಾಯನ. ಸಂಜೆ 7ಕ್ಕೆ ಶ್ರೀಸಿದ್ದಿವಿನಾಯಕ ಹವ್ಯಾಸಿ ಯಕ್ಷಗಾನ ಕಲಾ ತಂಡವು ದಕ್ಷಯಜ್ಞ ಮೂಡಲಪಾಯ ಯಕ್ಷಗಾನ ಪ್ರಸಂಗ ನಡೆಸಿಕೊಡಲಿದೆ.

ಸಮಾರೋಪ ಸಮಾರಂಭ: ಮಾ.26ರಂದು ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಜಿ.ಬಿ.ಜೋತಿಗಣೇಶ್​, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್​.ಸಿದ್ದಲಿಂಗಪ್ಪ, ವಾರ್ತಾ ಸಹಾಯಕಿ ಆರ್​.ರೂಪಕಲಾ, ಉಗಮ ಶ್ರೀನಿವಾಸ್​ ಉಪಸ್ಥಿತರಿರುವರು. ಎಚ್​.ರಾಮು ಜೋಗಿಹಳ್ಳಿ ಸಮಾರೋಪ ಭಾಷಣ ಮಾಡುವರು. ನಗರ ಡಿವೈಎಸ್ಪಿ ಕೆ.ಆರ್​.ಚಂದ್ರಶೇಖರ್​, ನಗರ ಠಾಣೆ ಸಿಪಿಐ ಬಿ.ಎಸ್​.ದಿನೇಶಕುಮಾರ್​ಗೆ ರಂಗಗೌರವ ಸಲ್ಲಿಸಲಾಗುವುದು ಎಂದು ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಶಿವಕುಮಾರ್​ ತಿಮ್ಮಲಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net