ಮೈಸೂರು ಅರಮನೆ ಅಂಗಳದಲ್ಲಿ ಯುಗಾದಿ ಸಂಗೀತೋತ್ಸವ

mysore
Published on

ಮೈಸೂರು: ಮೈಸೂರು ಅರಮನೆ ಆಡಳಿತ ಮಂಡಳಿ ವತಿಯಿಂದ ಯುಗಾದಿ ಸಂಗೀತೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಏ.9ರಿಂದ ಮೂರು ದಿನಗಳ ಕಾಲ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ.


9ರಂದು ಸಂಜೆ 5ಕ್ಕೆ ಗುರುರಾಜ್ ಮತ್ತು ತಂಡದಿಂದ ಸ್ಯಾಕ್ಸೋಫೋನ್ ವಾದನ, ಶ್ರೀಧರ ಮೂರ್ತಿ ಅವರಿಂದ ಪಂಚಾಂಗ ಶ್ರವಣ ನಡೆಯಲಿದ್ದು, ಸಂಜೆ 6.30ಕ್ಕೆ ಎಚ್.ರಾಜೇಶ್ ತಂಡದಿಂದ ಕರುಣಾಲಹರಿ ಗೀತೆಯ ಮೂಲಕ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಬದರಿ ದಿವ್ಯಭೂಷಣ ಮತ್ತು ತಂಡದಿಂದ ನೃತ್ಯವೈಭವ, ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಮತ್ತು ತಂಡದಿಂದ ಯುಗಾದಿ ಉತ್ಸವ ಏರ್ಪಡಿಸಲಾಗಿದೆ.


ಏ.10ರಂದು ಸಂಜೆ 5.30ಕ್ಕೆ ನಾಗೇಶ್ ಕಂದೇಗಾಲ ಮತ್ತು ತಂಡದಿಂದ ಭಾವ ಗೀತೋತ್ಸವ, ಸುಮುಖ್ ಸೂರ್ಯ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಅಮಿತ್ ರಾಜ್ ಮತ್ತು ತಂಡದಿಂದ ಲಯ ಅನುಭವ ಕಾರ್ಯಕ್ರಮ ನಡೆಯಲಿದೆ.

ಏ.11ರಂದು ಸಂಜೆ 5.30ಕ್ಕೆ ಚಲನಚಿತ್ರ ಸಂಗೀತ ನಿರ್ದೇಶಕ ಡಿ.ರಾಮಕೃಷ್ಣ ಅವರಿಂದ ಭಕ್ತಿಭಾವ ಗೀತೆಗಳ ಗಾನ ಲಹರಿ, ವಿದ್ವಾನ್ ಪ್ರೊ.ಸಿ.ಎ.ಶ್ರೀಧರ್ ಮತ್ತು ಸಿ.ಎಸ್.ಕೇಶವ್ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ದ್ವಂದ್ವ ವೇಣುವಾದನ, ಸಾಯಿ ವಿಗ್ನೇಶ್, ಲಕ್ಷ್ಮೀನಾಗರಾಜ್, ಎಂ.ಎಲ್.ಆನಂದ್ ತಂಡದಿಂದ ಸ್ವರ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಧ್ವನಿ-ಬೆಳಕು ರದ್ದು


ಯುಗಾದಿ ಸಂಗೀತೋತ್ಸವ ಅಂಗವಾಗಿ ಏ.8ರಿಂದ 12ರವರೆಗೆ ಮೈಸೂರು ಅರಮನೆ ಆವರಣದಲ್ಲಿ ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯುವ ಧ್ವನಿ-ಬೆಳಕು ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ಮೈಸೂರು ಅರಮನೆ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net