ಯುಗಾದಿ ಕರಿ, ಬಣ್ಣದಲ್ಲಿ ಮಿಂದೆದ್ದ ಯುವಕರು, ಮಕ್ಕಳು

31 SND 07
ಸಿಂಧನೂರು ತಾಲೂಕಿನ ತಿಡಿಗೋಳದಲ್ಲಿ ಯುಗಾದಿ ಕರಿ ಅಂಗವಾಗಿ ಯುವಕರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
Published on

ಸಿಂಧನೂರು: ತಾಲೂಕಿನ ಗ್ರಾಮೀಣ ಪ್ರದೇಶದ ವಿವಿಧ ಗ್ರಾಮಗಳಲ್ಲಿ ಯುಗಾದಿ ಹಬ್ಬದ ಮರುದಿನವಾದ ಕರಿಯಂದು ಸೋಮವಾರ ಯುವಕರು ಪರಸ್ಪರ ಬಣ್ಣ ಎರಚಿದರು.

ತಾಲೂಕಿನ ಕುರುಕುಂದ, ತಿಡಿಗೋಳ, ನಿಡಿಗೋಳ, ಉಪ್ಪಲದೊಡ್ಡಿ, ಗೊರೇಬಾಳ, ರೌಡಕುಂದ, ಮುಕ್ಕುಂದ, ಸಾಲಗುಂದ, ಪಗಡದಿನ್ನಿ, ವಿರೂಪಾಪುರ, ಅರಳಹಳ್ಳಿ, ಗುಂಜಳ್ಳಿ, ಜಾಲಿಹಾಳ, ಕೆ.ಬಸಾಪುರ, ಗಾಂಧಿನಗರ, ಕೆ.ಹಂಚಿನಾಳ ಸೇರಿದಂತೆ ನಾನಾ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಮಕ್ಕಳು, ಯುವಕರು ಬಣ್ಣದಾಟದಲ್ಲಿ ತೊಡಗಿಕೊಂಡರು.

ಬಿಸಿಲಿನ ಕಾವು ಹೆಚ್ಚಾಗುತ್ತಿದ್ದರೂ, ಲೆಕ್ಕಿಸದೆ ಹೋಳಿಯಲ್ಲಿಯೇ ಮುಳುಗಿ ಹೋಗಿದ್ದರು. ಕೆಲವರು ಬಣ್ಣದಾಟದಿಂದ ತಪ್ಪಿಸಿಕೊಳ್ಳಲು ಹೊಲ, ಮನೆಯೊಳಗೆ ಇದ್ದರೂ, ಅವರ ಸ್ನೇಹಿತರು ಒತ್ತಡದಿಂದ ಹೊರಗೆ ಕರೆದುಕೊಂಡು ಬಂದು ಬಣ್ಣ ಹಾಕಿ ಖುಷಿಪಟ್ಟರು. ಈ ವರ್ಷ ಹಿಂದಿನ ವರ್ಷಗಳಿಗಿಂತ ಹೆಚ್ಚಾಗಿ ಜನರು ಬಣ್ಣದಾಟದಲ್ಲಿ ತೊಡಗಿರುವುದು ವಿಶೇಷವಾಗಿತ್ತು. ಈ ಬಾರಿ ತುಂಗಭದ್ರಾ ಎಡದಂಡೆ ನಾಲೆಗೆ ನೀರಿದ್ದರಿಂದ ಬಣ್ಣ ತೊಳೆದುಕೊಳ್ಳಲು ಯುವಕರಿಗೆ ಅನುಕೂಲವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net