ಬೈಲಗದ್ದೆಯಲ್ಲಿ ಯುಗಾದಿ ಉತ್ಸವ

Bailagadde
Published on

ಕುಮಟಾ: ತಾಲೂಕಿನ ಅಳಕೋಡ ಪಂಚಾಯಿತಿ ವ್ಯಾಪ್ತಿಯ ಸಾಂತೂರಿನ ಬೈಲಗದ್ದೆಯಲ್ಲಿ ಸ್ಥಳೀಯ ನಾಗ ಚೌಡೇಶ್ವರಿ ಗೆಳೆಯರ ಬಳಗದಿಂದ ಗ್ರಾಮೀಣ ಪಾರಂಪರಿಕ ಸೊಗಡಿನಲ್ಲಿ ಅರ್ಥಪೂರ್ಣವಾಗಿ ಯುಗಾದಿ ಉತ್ಸವ ಆಚರಿಸಲಾಯಿತು.

ಹಾಲಕ್ಕಿ ಸಮಾಜದವರೇ ಹೆಚ್ಚಾಗಿ ವಾಸಿಸುತ್ತಿರುವ ಬೈಲಗದ್ದೆಯ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಹಾಲಕ್ಕಿ ಸಾಂಪ್ರದಾಯಿಕ ಉಡುಗೆ, ತೊಡುಗೆ, ಜಾನಪದ ಹಾಡು-ಹಸೆಗಳ ರಾಯಭಾರಿಯಂತಿರುವ ವಯೋವೃದ್ಧ ಹಾಲಕ್ಕಿ ಮಾತೆಯರಾದ ಶಂಕ್ರಿ ಗೌಡ, ತಿಮ್ಮಕ್ಕ ಗೌಡ, ಗಣಪಿ ಗೌಡ ಅವರನ್ನು ಸನ್ಮಾನಿಸಲಾಯಿತು. ಉತ್ಸವ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡೆ ಹಾಗೂ ನರ್ತನ ಸ್ಪರ್ಧೆ ವಿಜೇತರಿಗೆ ಸ್ಥಳೀಯ ವಿನಾಯಕ ನಾಯ್ಕ ದಂಪತಿ ಬಹುಮಾನ ವಿತರಿಸಿದರು.

ಊರ ಗೌಡರಾದ ಗಜಾನನ ಗೌಡ, ಸಾಮಾಜಿಕ ಕಾರ್ಯಕರ್ತ ಮಹೇಶ ದೇಶಭಂಡಾರಿ, ನಾಗಚೌಡೇಶ್ವರಿ ಗೆಳೆಯರ ಬಳಗದ ಅಧ್ಯಕ್ಷ ಸುರೇಶ ಗೌಡ, ಕಾರ್ಯದರ್ಶಿ ಗಣಪು ಗೌಡ, ಖಜಾಂಚಿ ಜಟ್ಟು ಗೌಡ ಇತರರು ಇದ್ದರು. ಮಂಜುಳಾ ಜಿ. ಗೌಡ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ರಂಜಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net