ಉದ್ಯೋಗಂ ಮಹಿಳಾ ಲಕ್ಷಣಂ

Udyogam Mahila Lakshanam
ಮಹಾಲಿಂಗಪುರದ ಬಸವನಗರದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರವನ್ನು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಉದ್ಘಾಟಿಸಿದರು. ಸಹಜಯೋಗಿ ಸಹಜಾನಂದ ಶ್ರೀಗಳು, ಎಂ. ಗುಂಡಪ್ಪ ಇತರರಿದ್ದರು.
Published on

ಮಹಾಲಿಂಗಪುರ: ಈಗ ಕಾಲ ಬದಲಾಗಿದೆ. ಮಹಿಳೆಯರು ಎಲ್ಲ ರಂಗಗಳಲ್ಲೂ ಮುಂದುವರಿದಿದ್ದಾರೆ. ಈಗ ‘ಉದ್ಯೋಗಂ ಮಹಿಳಾ ಲಕ್ಷಣಂ’ ಎಂಬಷ್ಟರ ಮಟ್ಟಿಗೆ ಸರ್ವ ಕ್ಷೇತ್ರಗಳಲ್ಲೂ ಮಹಿಳೆಯರದ್ದೇ ಪಾರುಪತ್ಯ ಎಂದು ಸ್ಥಳೀಯ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಸಹಜಾನಂದ ಸ್ವಾಮಿಗಳು ಹೇಳಿದರು.

ಪಟ್ಟಣದ ಬಸವನಗರದ ಸಮುದಾಯ ಭವನದಲ್ಲಿ ಸಿ.ಎಂ. ಹುರಕಡ್ಲಿ ಫೌಂಡೇಷನ್, ಹೊಳೆಮಠದ ಐರಣ ಮಹಾಸಂಸ್ಥಾನ ಹಾಗೂ ದಾವಣಗೆರೆಯ ಸ್ಫೂರ್ತಿ ನಗರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹಿಳಾ ಉಚಿತ ಸ್ವಯಂ ಉದ್ಯೋಗ ತರಬೇತಿ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಹಿಳೆಯರಿಗೆ ಸ್ವಾವಲಂಬನೆ, ಆರ್ಥಿಕ ಸದೃಢ, ಕೌಶಲ ವರ್ಧನೆಗಾಗಿ ಉಚಿತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ಸ್ಫೂರ್ತಿ ತರಬೇತಿ ಸಂಸ್ಥೆಯ ರಾಜ್ಯ ಸಂಘಟಕ ಎಂ. ಗುಡ್ಡಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಹತೆ, ವಯಸ್ಸು, ಜಾತಿ, ಧರ್ಮದ ನಿರ್ಬಂಧವಿಲ್ಲದೆ ಎಲ್ಲ ಮಹಿಳೆಯರಿಗೂ ಉಚಿತವಾಗಿ ಟೆಕ್ಸ್‌ಟೈಲ್ ಪ್ರಿಂಟಿಂಗ್, ಸ್ಕ್ರೀನ್ ಪ್ರಿಂಟಿಂಗ್, ವೆಲ್ವೆಟ್ ಡಿಸೈನಿಂಗ್, ಕ್ಲಾಥ್ ವಾಟರ್‌ಪ್ರ್ೂ ಪ್ರಿಂಟಿಂಗ್, ಮ್ಯಾಟ್ ಪ್ರಿಂಟಿಂಗ್, ್ಯಾಷನ್ ಡಿಸೈನಿಂಗ್, ಕಟಿಂಗ್, ಪಿಲ್ಲೋ ಕವರ್, ಬ್ಯೂಟಿಷಿಯನ್, ಸ್‌ಟಾ ಡಾಲ್ ಮೇಕಿಂಗ್, ಮೆಹಂದಿ, ಜೂಲ್ ವರ್ಕ್ ಮುಂತಾದ ತರಬೇತಿ ನೀಡುತ್ತಿದೆ. ಮಹಿಳೆಯರು ತಮ್ಮ ಆರ್ಥಿಕ ಸದೃಢತೆಗೆ ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಯರಾಮ ಶೆಟ್ಟಿ, ಚನ್ನಬಸು ಹುರಕಡ್ಲಿ ಮಾತನಾಡಿದರು. ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಉದ್ಘಾಟಿಸಿದರು.

ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬಲವಂತಗೌಡ ಪಾಟೀಲ, ಸಿದ್ಧಾರೂಢ ಮಠದ ಉತ್ತರಾಧಿಕಾರಿ ಸಿದ್ಧಾನಂದ ಭಾರತಿ ಸ್ವಾಮಿಗಳು, ಪುರಸಭೆ ಸದಸ್ಯೆಯರಾದ ಸವಿತಾ ಹುರಕಡ್ಲಿ, ಚಾಂದನಿ ನಾಯಕ, ಗಣ್ಯರಾದ ಮಂಜು ಬಕರೆ, ಶ್ರೀಶೈಲ ಬಾಡನವರ, ಈರಪ್ಪ ಕಡಕೋಳ, ಭೀಮಶೀ ಪೂಜಾರಿ, ಕಾನಿಪ ಸಂಘದ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಮಹಾಲಿಂಗಪ್ಪ ಕಂಠಿ, ಶ್ರೀಶೈಲ ಬಳಗಾರ, ಮಲಕಾಜಪ್ಪ ಹನಗಂಡಿ, ದುಂಡಪ್ಪ ಮುರಗೋಡ ಇತರರಿದ್ದರು.


ಕಾವ್ಯ ಮಾಳಿ ಪ್ರಾರ್ಥಿಸಿದರು. ಚಂದ್ರಶೇಖರ ಮೋರೆ ಸ್ವಾಗತಿಸಿದರು. ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net