ಅ.12ರಂದು ಮಂಡ್ಯ ನಗರದಲ್ಲಿ ನೇರ ಸಂದರ್ಶನ: ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಾವಕಾಶ

Job
Published on

ಮಂಡ್ಯ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಭಾರತ್ ಫೈನಾನ್‌ಷಿಯಲ್ ಇನ್‌ಕ್ಲೂಷನ್, ಫ್ಯೂಷನ್ ಮೈಕ್ರೋ ಫೈನಾನ್ಸ್ ಹಾಗೂ ಎಚ್.ವಿ.ಅಡ್ವಾನ್ಸ್‌ಡ್ ಮೆಟೀರಿಯಲ್ಸ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಉದ್ಯೋಗಕ್ಕಾಗಿ ಅ.12ರಂದು ನಗರದಲ್ಲಿ ನೇರ ಸಂದರ್ಶನ ಆಯೋಜಿಸಲಾಗಿದೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ(ಫಿಟ್ಟರ್, ಟರ್ನರ್ ಟ್ರೇಡ್) ಹಾಗೂ ಯಾವುದೇ ಪದವಿ ಸೇರಿದಂತೆ(ಬಿ.ಎಸ್ಸಿ-ಕೆಮಿಸ್ಟ್ರಿ), ಡಿಪ್ಲಮೋ(ಮೆಕ್ಯಾನಿಕಲ್) ಉತ್ತೀರ್ಣರಾದ 18 ರಿಂದ 30 ವರ್ಷದೊಳಗಿನ ಅಭ್ಯರ್ಥಿಗಳು ಸ್ವವಿವರೊಂದಿಗೆ ಅಂದು ಬೆಳಗ್ಗೆ 10.30 ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ ದೂ.ಸಂ 08232-295124 ಹಾಗೂ ಮೊ.ಸಂ 8660061488 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net