ಹತ್ತನೇ ವಿಶ್ವದಾಖಲೆಗೆ ತನುಶ್ರೀ ಸಜ್ಜು

UDP-17-7-Tanushree
Published on

 ಬೆಹೆರಿನ್​ನಲ್ಲಿ 24ಕ್ಕೆ ಯೋಗ ಕಾರ್ಯಕ್ರಮ

ಶುಭ ಹಾರೈಕೆಯೊಂದಿಗೆ ಬೀಳ್ಕೊಡುಗೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಈಗಾಗಲೇ ಯೋಗದಲ್ಲಿ ಎಂಟು, ಭರತನಾಟ್ಯದಲ್ಲಿ ಒಂದು ಸೇರಿ ಒಟ್ಟು ಒಂಬತ್ತು ವಿಶ್ವದಾಖಲೆ ಮಾಡಿರುವ ಯೋಗಪಟು ತನುಶ್ರೀ ಪಿತ್ರೋಡಿ 10ನೇ ವಿಶ್ವದಾಖಲೆಗೆ ಸಜ್ಜಾಗಿದ್ದಾಳೆ.

ಕನ್ನಡ ಸಂಘ ಬೆಹೆರಿನ್​ ಮತ್ತು ಬೆಹೆರಿನ್​ ಯೋಗ ಕಮ್ಯುನಿಟಿ ಸಹಯೋಗದಲ್ಲಿ ಅ.24ರಂದು ಬೆಹೆರಿನ್​ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ತನುಶ್ರೀ ವಿಶ್ವದಾಖಲೆ ಮಾಡುವ ಪ್ರಯತ್ನ ನಡೆಸಲಿದ್ದಾಳೆ.

ಉಡುಪಿಯಲ್ಲಿ ಬೀಳ್ಕೊಡುಗೆ

ವಿದೇಶದಲ್ಲಿ ಯೋಗದಲ್ಲಿ ಸಾಧನೆ ಮಾಡಲಿರುವ ತನುಶ್ರೀಗೆ ಶುಭ ಕೋರಲು ಹಾಗೂ ಸಾಧನೆಯೊಂದಿಗೆ ಮರಳಲು ಉಡುಪಿಯ ಬಡಗುಬೆಟ್ಟು ಕೋ-ಆಪರೇಟಿವ್​ ಸೊಸೈಟಿಯ ಸಭಾಂಗಣದಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೊಸೈಟಿಯ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ, ಶಾಸಕ ಯಶ್​ಪಾಲ್​ ಸುವರ್ಣ, ಸಂಗೀತ ಗುರು ಮಧೂರು ಬಾಲಸುಬ್ರಹ್ಮಣ್ಯ, ನೃತ್ಯ ಗುರು ರಾಮಕೃಷ್ಣ ಕೊಡಂಚ, ಕಾಪು ಬಿಜೆಪಿ ಅಧ್ಯಕ್ಷ ಜಿತೇಶ್​ ಶೆಟ್ಟಿ, ಉದ್ಯಾವರ ನಾಗೇಶಕುಮಾರ್​, ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ನಿಟ್ಟೂರು, ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು, ಗಿರಿಜಾ ಸರ್ಜಿಕಲ್ಸ್​ನ ಹರೀಶಕುಮಾರ್​ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಶುಭ ಹಾರೈಸಿದರು.

ತಂದೆ ಉದಯ್​ ಪಿತ್ರೋಡಿ, ತಾಯಿ ಸಂಧ್ಯಾ ಪಿತ್ರೋಡಿ, ಸಹೋದರಿ ರೀತು ಉಪಸ್ಥಿತರಿದ್ದರು.

ಈ ಹಿಂದೆ ಅದಮಾರು ಮಠದ ಪರ್ಯಾಯದ ಸಂದರ್ಭದಲ್ಲಿ 45 ನಿಮಿಷದಲ್ಲಿ 245 ಆಸನ ಮಾಡುವ ಮೂಲಕ ದಾಖಲೆ ಮಾಡಿದ್ದೆ. ಈಗ ಬೆಹೆರಿನ್​ನಲ್ಲಿ ಒಂದು ತಾಸಿನಲ್ಲಿ 300 ಆಸನ ಮಾಡುವ ಮೂಲಕ ಗೋಲ್ಡನ್​ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ ಪ್ರಯತ್ನ ಮಾಡಲಿದ್ದೇನೆ. ಎಲ್ಲರ ಆಶೀರ್ವಾದ ಇರಲಿ. | ತನುಶ್ರೀ ಪಿತ್ರೋಡಿ. ಖ್ಯಾತ ಯೋಗ ಪಟು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net