ಸರ್ಕಾರ ಪ್ಲಾಸ್ಟಿಕ್​ ರಾಷ್ಟ್ರಧ್ವಜ ನಿಷೇಧಿಸಲಿ...

Flag 2
Published on

ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಶ್ರೀನಿವಾಸ ರಾವ್​ ಕೆ. ಒತ್ತಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಭಾರತದ ತ್ರಿವರ್ಣ ಧ್ವಜವು ರಾಷ್ಟ್ರೀಯ ಭಾವೈಕ್ಯದ ಪ್ರತೀಕ ಹಾಗೂ ಸಂಕೇತವಾಗಿದೆ. ಅಂತಹ ಧ್ವಜವನ್ನು ವಾಣಿಜ್ಯಾರ್ಥವಾಗಿ ಪ್ಲಾಸ್ಟಿಕ್​ನಲ್ಲಿ ತಯಾರಿಸಿ ಮಾರಾಟ ಮಾಡುವುದು ಸೂಕ್ತವಲ್ಲ. ಹಿಂದು ಜನ ಜಾಗೃತಿ ಸಮಿತಿ ಇತ್ತೀಚೆಗೆ ಪ್ಲಾಸ್ಟಿಕ್​ ಧ್ವಜ ಮಾರಾಟ ನಿಷೇಧಿಸುವಂತೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವುದಕ್ಕೆ ಸಮಾನ ಮನಸ್ಕ ಕನ್ನಡಿಗರ ವೇದಿಕೆಯೂ ಬೆಂಬಲಿಸುತ್ತದೆ ಎಂದು ಅಧ್ಯಕ್ಷ ಶ್ರೀನಿವಾಸ ರಾವ್​ ಕೆ. ತಿಳಿಸಿದ್ದಾರೆ.

UDP-10-6-Plastic Flag
Flag
ಭಾರತವು ಸ್ವಾತಂತ್ರ್ಯ ಗಳಿಸಿದ್ದರ ಹೆಮ್ಮೆಯ ಪ್ರತೀಕವಾಗಿ ಆ.15ರಂದು ಹಾಗೂ ಗಣರಾಜ್ಯೋತ್ಸವದ ದಿನದಂದು ಅಭಿಮಾನ ಪೂರ್ವಕವಾಗಿ ಜ.26ರಂದು ರಾಷ್ಟ್ರ ಧ್ವಜಾರೋಹಣ ಮಾಡಲಾಗುತ್ತದೆ. ಆದರೆ, ರಾಷ್ಟ್ರದ ಗುರುತಾಗಿರುವ ತಿರಂಗಾವನ್ನು ಇಂತಹ ದಿನಗಳಲ್ಲಿ ಪ್ಲಾಸ್ಟಿಕ್​ನಲ್ಲಿ ಮುದ್ರಿಸಿ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಶಾಲಾ ಮಕ್ಕಳು ಅದನ್ನು ಖರೀದಿಸಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ದಿನದಂದು ಶಾಲೆಗೆ ಕೊಂಡೊಯ್ಯುತ್ತಾರೆ. ಧ್ವಜದ ಕುರಿತು ಅರಿವಿಲ್ಲ ಬಹುತೇಕರು ಅದನ್ನು ಆಟವಾಡಿ, ಮರುದಿನ ಕಸದ ಬುಟ್ಟಿಗೆ ಅಥವಾ ಚರಂಡಿಗೆ ಎಸೆಯುವುದು ಕಂಡುಬರುತ್ತದೆ.

ಶಿಕ್ಷಕರೂ ಅರಿವು ಮೂಡಿಸಬೇಕು

ಪ್ಲಾಸ್ಟಿಕ್​ ಧ್ವಜವಾಗಿದ್ದರಿಂದ ಅವು ಬೇಗನೆ ನಾಶವೂ ಆಗದೆ ರಸ್ತೆ ಬದಿಯಲ್ಲಿ ಬಿದ್ದಿರುತ್ತದೆ. ಇದು ನಮ್ಮ ಧ್ವಜ ಹಾಗೂ ರಾಷ್ಟ್ರಕ್ಕೆ ಅಪಮಾನ ಮಾಡಿದಂತಾಗುತ್ತದೆ. ಸರ್ಕಾರ ಕೂಡಲೇ ಪ್ಲಾಸ್ಟಿಕ್​ ಧ್ವಜ ಮಾರಾಟವನ್ನು ನಿಷೇಧಿಸಬೇಕು. ಶಾಲಾ-ಕಾಲೇಜುಗಳ ಶಿಕ್ಷಕರೂ ಸಹ ಪ್ಲಾಸ್ಟಿಕ್​ ಬಾವುಟ ಖರೀದಿಸದಂತೆ ವಿದ್ಯಾರ್ಥಿಗಳಿಗೆ ಮೊದಲೇ ಅರಿವು ಮೂಡಿಸಬೇಕು ಎಂದು ಶ್ರೀನಿವಾಸ ರಾವ್​ ಕೆ. ವಿನಂತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net