

ವಿಜಯವಾಣಿ ಸುದ್ದಿಜಾಲ ಉಡುಪಿ
ಕರ್ನಾಟಕ ಲಲಿತಕಲಾ ಅಕಾಡೆಮಿಯು 2023-24ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ರಾಜ್ಯದ ಕರಾವಳಿ ಭಾಗದಲ್ಲಿದ್ದ ಖ್ಯಾತ ಹಾಗೂ ಅಗಲಿದ ಕಲಾವಿದರ ಕುರಿತಾಗಿ ಕಾವಿ ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆ ಬರೆದಿರುವ ಮೊಡೆಪು ಪುಸ್ತಕವನ್ನು ಆಯ್ಕೆ ಮಾಡಿದೆ.
ಬೆಂಗಳೂರಿನಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರು ಡಾ. ಜನಾರ್ದನ ಹಾವಂಜೆ ಅವರನ್ನು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ನೀಲಮ್ಮ, ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ, ಕಲಾವಿದರಾದ ವಿ.ಜಿ. ವೇಣುಗೋಪಾಲ ಹಾಗೂ ಅಕಾಡೆಮಿಯ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ಕರಾವಳಿಯ ಹಿರಿಯ ಕಲಾವಿದರಾಗಿದ್ದ ಕೆ.ಕೆ. ಹೆಬ್ಬಾರ, ಜಿ.ಎಸ್. ಶೆಣೈ, ಕೋಟ ಶಿವರಾಮ ಕಾರಂತ, ಕೆ.ಎಲ್. ಭಟ್ ಶೇವಗೂರ್ ಸೇರಿದಂತೆ 32 ಅಗಲಿದ ಕಲಾವಿದರ ವ್ಯಕ್ತಿ ಪರಿಚಯವನ್ನು ಮೊಡೆಪು ಪುಸ್ತಕ ಒಳಗೊಂಡಿದೆ.
ಆರ್ಟ್ ಕೆನರಾ ಸಂಸ್ಥೆಯು ಮೊಡೆಪು ಕೃತಿಯ ಪ್ರಕಾಶಕರಾಗಿದ್ದು, ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಎಲ್ಲ ಹಿರಿಯ ಕಲಾವಿದರ ಕಲಾಕೃತಿಗಳ ಪ್ರದರ್ಶನ ಮಂಗಳೂರು ಹಾಗೂ ಉಡುಪಿಯ ವಿವಿಧ ಭಾಗಗಳಲ್ಲಿ ನಡೆದಿತ್ತು. ಕಲೆಗಳ ರಕ್ಷಣೆಗೆ ಅವರ ಕೊಡುಗೆಯ ಕುರಿತು ಪುಸ್ತಕ ಮಾಹಿತಿ ನೀಡಲಿದೆ. | ಡಾ. ಜನಾರ್ದನ ರಾವ್ ಹಾವಂಜೆ. ಕಾವಿ ಕಲಾವಿದ, ಉಡುಪಿ