ಯುವ ಜನತೆಗೆ ಸೂಕ್ತ ಮಾರ್ಗದರ್ಶನ ಅಗತ್ಯ: ಶಾಸಕ ಯಶ್​ಪಾಲ್​ ಸುವರ್ಣ

youth parliament
ಶಾಸಕ ಯಶ್​ಪಾಲ್​ ಸುವರ್ಣ ಯೂತ್​ ಪಾರ್ಲಿಮೆಂಟ್​ ಉದ್ಘಾಟಿಸಿದರು.
Published on: 

ಉಡುಪಿ: ದೇಶ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದ್ದು, 2047ರ ವೇಳೆಗೆ ವಿಕಸಿತ ಭಾರತಕ್ಕೆ ಪೂರಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. 30 ಕೋಟಿ ಯುವಜನತೆ ದೇಶದ ಸಂಪತ್ತು. ಅವರಿಗೆ ಸರಿಯಾದ ಮಾರ್ಗದರ್ಶನ, ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಯುವ ಸಂಸತ್ತು ವೇದಿಕೆಯಾಗಲಿ ಎಂದು ಶಾಸಕ ಯಶ್​ಪಾಲ್​ ಸುವರ್ಣ ಹೇಳಿದರು.

ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವತಿಯಿಂದ ಎಂಜಿಎಂ ಮತ್ತು ಎನ್​ಎಸ್​ಎಸ್​ ಸಹಯೋಗದೊಂದಿಗೆ ಶುಕ್ರವಾರ ವಿಕಸಿತ್​ ಭಾರತ್​ ಯಂಗ್​ ಲೀಡರ್ಸ್​ ಡಯಲಾಗ್​ ಷೋಷವಾಕ್ಯದಡಿ ನಡೆದ ಯೂತ್​ ಪಾರ್ಲಿಮೆಂಟ್​ ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹಾಯಕ ಪ್ರಾಧ್ಯಾಪಕ ಸಂತೋಷ್​ ಪ್ರಭು, ಪತ್ರಕರ್ತ ಕಿರಣ್​ ಮಂಜನಬೈಲ್​, ಮಾಹೆ ಸಂಶೋಧನಾರ್ಥಿ ಶ್ರೇಯಸ್​ ಜಿ. ಕೋಟ್ಯಾನ್​, ಉಡುಪಿಯ ಟೆಕ್​ ಪಾಲಿಸಿ ಆ್ಯಂಡ್​ ಸ್ಟ್ರಾಟರ್ಜಿ ಸ್ಪೆಶಲಿಸ್ಟ್​ ಅಭಿಜಿಜ್ಯ ಎನ್​.ಎಸ್​., ಜೇಸಿ ತರಬೇತುದಾರೆ ಜ್ಯೋತಿ ಪ್ರಶಾಂತ್​ ಉಪಸ್ಥಿತರಿದ್ದರು.

ಜಿಲ್ಲಾ ಮೈ ಭಾರತ್​ ಪ್ರಭಾರ ನಿರ್ದೇಶಕ ಉಲ್ಲಾಸ್​ ಕೆ.ಟಿ.ಕೆ. ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಎನ್​ಎಸ್​ಎಸ್​ ಅಧಿಕಾರಿ ಸುಚಿತ್​ ಕೋಟ್ಯಾನ್​ ನಿರೂಪಿಸಿ, ವಂದಿಸಿದರು.