ಟೆಂಪೋಗೆ ಬೈಕ್ ಡಿಕ್ಕಿಯಾಗಿ ಯುವಕ ಸಾವು

 ರಿನ್ಸ್ ಶಿಬಿ
ರಿನ್ಸ್ ಶಿಬಿ
Published on
ಬೆಳ್ತಂಗಡಿ: ಪಣಕಜೆ ಮಸೀದಿ ಸಮೀಪ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿವಾಸಿ ರಿನ್ಸ್ ಶಿಬಿ(24) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮಂಗಳವಾರ ಸಂಜೆ ಪಣಕಜೆಯಲ್ಲಿ ಟೆಂಪೋದ ಹಿಂಬದಿಗೆ ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ರಿನ್ಸ್ ಶಿಬಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net