ಬಾವಿಗೆ ಹಾರಿ ಯುವಕ ಆತ್ಮಹತ್ಯೆ

Suicide
Suicide
Published on

ಕಾಸರಗೋಡು: ಕೊಡ್ಲಮೊಗರು ಭಂಡಾರಮನೆ ನಿವಾಸಿ ಕಾಂತಪ್ಪ ಪೂಜಾರಿ ಎಂಬುವರ ಪುತ್ರ ಕೆ.ನವೀನ್ (38) ಗುರುವಾರ ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೇಲಕ್ಕೆತ್ತಿದರು.

ಕೂಲಿ ಕಾರ್ಮಿಕನಾಗಿದ್ದ ಅವರು ಅವಿವಾಹಿತರಾಗಿದ್ದರು. ಆಸ್ಮಾ ಬಾಧಿಸಿದ್ದು, ಕಾಯಿಲೆ ವಾಸಿಯಾಗದ ಕಾರಣ ಮನನೊಂದು ಕೃತ್ಯವೆಸಗಿರುವುದಾಗಿ ಸಂಶಯಿಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net