

ಕುಂದಾಪುರ: ಬೆಂಗಳೂರಿನ ಹೋಟೆಲ್‌ನಲ್ಲಿ ಕೆಲಸ ವಾಡಿಕೊಂಡಿದ್ದ ಹಕ್ಲಾಡಿ ಗ್ರಾಮದ ಕೆಳಾಕಳಿ ವಾರಿಕಾಂಬಾ ದೇವಸ್ಥಾನ ಬಳಿ ನಿವಾಸಿ ಜೀವನ(27) ಎಂಬುವರು ಹಕ್ಲಾಡಿಯ ಸ್ವಗೃಹದಲ್ಲಿ ನೇಣುಬಿಗಿದು ಆತ್ಮಹತ್ಯೆ ವಾಡಿಕೊಂಡಿದ್ದಾರೆ. ವಿಪರೀತ ಮದ್ಯಪಾನ ಚಟ ಹೊಂದಿದ್ದ ಅವರು, 15 ದಿನಗಳ ಹಿಂದೆ ಮನೆಗೆ ಬಂದಿದ್ದರು. ನ.8ರಂದು ಮದ್ಯಪಾನ ವಾಡಿಕೊಂಡು ಬಂದು ಸಂಜೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಬಸ್ರೂರು ಗ್ರಾಮದ ಹಟ್ಟಿಕುದ್ರು ಕಳಿನಬಾಗಿಲು ಎಂಬಲ್ಲಿ ರೈಲ್ವೆ ಹಳಿಯ ಪಕ್ಕದಲ್ಲಿ ಕಾಡು ಪೊದೆಗಳ ಮಧ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹದ ಪ್ಯಾಂಟ್‌ನಲ್ಲಿದ್ದ ಆಧಾರ್ ಕಾರ್ಡ್ ಆಧಾರದ ಮೇಲೆ ಮೃತಪಟ್ಟವರನ್ನು ಉತ್ತರಪ್ರದೇಶದ ಕತ್ಕಿಯಾನ ಖುಷಿ ನಗರ ನಿವಾಸಿ ಟಿಟ್ಟು ಪ್ರಸಾದ್(38) ಎಂದು ಗುರುತಿಸಲಾಗಿದೆ. 3 ತಿಂಗಳ ಹಿಂದೆ ಟಿಟ್ಟು ಪ್ರಸಾದ್ ಎಂಬುವರು ಚಲಿಸುವ ರೈಲಿನಿಂದ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.