ಕಾರ್ಕಳ ನಗರದ ಯುವತಿ ಸರ್ಕಾರಿ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ ಓದುತ್ತಿದ್ದ ಸಂದರ್ಭ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ಬಜಗೋಳಿಯ ಸಚಿತ್ ಬಲ್ಲಾಳ್ ಎಂಬ ಯುವಕನ ಪರಿಚಯವಾಗಿತ್ತು. ಇದೀಗ ಯುವತಿ ನನ್ನ ಜತೆ ಗೆಳೆತನ ಬಿಡುವಂತೆ, ಮೆಸೇಜ್ ಮಾಡದಂತೆ ಹೇಳಿದಾಗ ಆತ ಜುಲೈ 15ರಂದು ಆಕೆಗೆ ಕರೆ ಮಾಡಿ ಕಾರ್ಕಳ ಬಸ್ ನಿಲ್ದಾಣಕ್ಕೆ ಬರುವಂತೆ ತಿಳಿಸಿದ್ದ. ಅದರಂತೆ ಬಂದ ಆಕೆಯನ್ನು ಊಟಕ್ಕೆ ಕರೆದೊಯ್ದು ಅಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆದು, ಆತ ಯುವತಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆ. ಜತೆಗೆ ನಿನ್ನ ವಿಡಿಯೋ ನನ್ನಲಿದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.