ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ನಿವಾಸಿ ದಿ.ಹೆಗ್ಗಡೇಶ ಗೌಡ ಅವರ ಪುತ್ರಿ, ಬಡಗನ್ನೂರು ಗ್ರಾಮ ವ್ಯಾಪ್ತಿಯ ಸಮುದಾಯ ಆರೋಗ್ಯಾಧಿಕಾರಿಯಾಗಿದ್ದ ಪ್ರಜ್ಞಾ(26) ಮೃತ ಯುವತಿ. ಜೂ.21ರಂದು ಮನೆಯಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 27 ದಿನ ಜೀವನ್ಮರಣ ಹೋರಾಟ ಸ್ಥಿತಿಯಲ್ಲಿದ್ದ ಪ್ರಜ್ಞಾ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.