ಹೋರಾಟಕ್ಕೆ ತಾರುಣ್ಯವನ್ನೇ ಅರ್ಪಿಸಿದ ಯುವಕರು

ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಿಂದ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ತನಕ ತಿರಂಗಾ ಯಾತ್ರೆ ನಡೆಯಿತು. ಪ್ರಮುಖರಾದ ಪುಣ್ಯಪಾಲ್, ಉಮಾನಾಥ ಕೋಟ್ಯಾನ್, ದಿನೇಶ್ ಪುತ್ರನ್ ಮೊದಲಾದವರಿದ್ದರು.
ಕಿನ್ನಿಗೋಳಿ ಪಟ್ಟಣ ಪಂಚಾಯಿತಿಯಿಂದ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ತನಕ ತಿರಂಗಾ ಯಾತ್ರೆ ನಡೆಯಿತು. ಪ್ರಮುಖರಾದ ಪುಣ್ಯಪಾಲ್, ಉಮಾನಾಥ ಕೋಟ್ಯಾನ್, ದಿನೇಶ್ ಪುತ್ರನ್ ಮೊದಲಾದವರಿದ್ದರು.
Published on

ಕಿನ್ನಿಗೋಳಿ: ಸ್ವಾತಂತ್ರ್ಯ ಹೋರಾಟಕ್ಕಾಗಿ ಅದೆಷ್ಟೋ ತರುಣರು ತಮ್ಮ ತಾರುಣ್ಯವನ್ನೇ ಅರ್ಪಿಸಿದ್ದಾರೆ. ಸ್ವಾತಂತ್ರ್ಯೋತ್ಸವ ಆಚರಣೆ ಕೇವಲ ಸಂಭ್ರಮ ವಾತ್ರವಲ್ಲ, ಅದು ನಮ್ಮ ಜವಾಬ್ದಾರಿ ಎಂದು ಬಿಜೆಪಿ ನಾಯಕ ಪುಣ್ಯಪಾಲ್ ಹೇಳಿದರು.

ಮೂಲ್ಕಿ-ಮೂಡುಬಿದಿರೆ ತಿರಂಗಾ ಯಾತ್ರೆ ಆಯೋಜನಾ ಸಮಿತಿ ಆಶ್ರಯದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯಿತಿನಿಂದ ಕಿನ್ನಿಗೋಳಿ ಸುಖಾನಂದ ಶೆಟ್ಟಿ ಸರ್ಕಲ್ ತನಕ ಶನಿವಾರ ನಡೆದ ತಿರಂಗಾ ಯಾತ್ರೆಯಲ್ಲಿ ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ವಾತನಾಡಿ, ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಮಹಾಚೇತನಗಳನ್ನು ನೆನಪಿಸಿ ಗೌರವ ಸಲ್ಲಿಸಬೇಕು. ಪ್ರತಿ ಮನೆ, ಪ್ರತಿ ಹೃದಯದಲ್ಲಿ ತಿರಂಗಾದ ಗೌರವವನ್ನು ಎತ್ತಿ ಹಿಡಿಯೋಣ ಎಂದರು.
ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಉಪಾಧ್ಯಕ್ಷ ಸುನೀಲ್ ಆಳ್ವ, ಅಭಿಲಾಷ್ ಶೆಟ್ಟಿ ಕಟೀಲು, ಗುರುರಾಜ್ ಮಲ್ಲಿಗೆಯಂಗಡಿ, ಲೋಕೇಶ್ ಬಜಪೆ, ಈಶ್ವರ್ ಕಟೀಲು, ಶಾಂತಿಪ್ರಸಾದ್ ಹೆಗ್ಡೆ ವಿನೋದ್ ಬೊಳ್ಳೂರು, ರಂಜಿತ್ ಶೆಟ್ಟಿ ತೋಡಾರು ಮೊದಲಾದವರಿದ್ದರು. ವಿನೋದ್ ಸಾಲ್ಯಾನ್ ಬೆಳ್ಮಾಯರು ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net