ಮಾರ್ಗದರ್ಶನವಿಲ್ಲದೆ ದಾರಿ ತಪ್ಪುತ್ತಿರುವ ಕಿರಿಯರು

 ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಉದ್ಯಮಿ ರಮೇಶ್ ಬಾಳೆಹಿತ್ಲು, ಸೋಮಯ್ಯ ಹನೈನಡೆ ಮೊದಲಾದವರಿದ್ದರು.
ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಸಭೆಯಲ್ಲಿ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಉದ್ಯಮಿ ರಮೇಶ್ ಬಾಳೆಹಿತ್ಲು, ಸೋಮಯ್ಯ ಹನೈನಡೆ ಮೊದಲಾದವರಿದ್ದರು.
Published on

ಬಂಟ್ವಾಳ: ಅರವತ್ತು ವರ್ಷ ತುಂಬಿ ಹಿರಿಯ ನಾಗರಿಕರಾದವರು ತಮ್ಮ ಮನಸ್ಸಿನಿಂದ ನಾವು ವೃದ್ಧರಲ್ಲ, ಹಿರಿಯರು ಅಂದುಕೊಂಡಾಗ ಸಮಾಜದ ಕಿರಿಯರಿಗೆ ಮಾರ್ಗದರ್ಶನ ಮಾಡಲು ಸಾಧ್ಯ. ಇಂದಿನ ಯುವಪೀಳಿಗೆ ಹಿರಿಯರ ಮಾರ್ಗದರ್ಶನವಿಲ್ಲದೆ ದಾರಿ ತಪ್ಪುತ್ತಿರುವುದನ್ನು ಕಾಣಬಹುದಾಗಿದೆ. ಇದಕ್ಕೆಲ್ಲ ಇಂತಹ ಸಂಘದ ಮಾರ್ಗದರ್ಶನ ಅಗತ್ಯವಿದೆ ಎಂದು ಉದ್ಯಮಿ ರಮೇಶ್ ಬಾಳೆಹಿತ್ಲು ಹೇಳಿದರು.

ಬಿ.ಸಿ.ರೋಡ್‌ನಲ್ಲಿ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ 7ನೇ ವಾರ್ಷಿಕ ಮಹಾಸಭೆ ಹಾಗೂ 72 ವರ್ಷ ತುಂಬಿದ ಹಿರಿಯ ನಾಗರಿಕರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಮೇಶ್ ಸಂಚಯಗಿರಿ, ರಾಜ್ಯ ಕರಾವಳಿ ಕುಲಾಲ ಕುಂಬಾರ ಯುವವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸುಮಿತ್ ಸಾಲಿಯಾನ್ ಸೋರ್ನಾಡ್ ಭಾಗವಹಿಸಿದ್ದರು. 72 ವರ್ಷ ತುಂಬಿದ ಪದ್ಮನಾಭ ಎಂ, ಟಿ.ಶೇಷಪ್ಪ ಮಾಸ್ಟರ್, ಕೃಷ್ಣಪ್ಪ ಬಡ್ಡಕಟ್ಟೆ, ರಾಮಚಂದ್ರ ಮಾಸ್ಟರ್, ಭೋಜ ಬಂಗೇರ, ಧರ್ಮಣ ಬಡ್ಡಕಟ್ಟೆ, ಗಂಗಾಧರ ಮಾಸ್ಟರ್ ಹಾಗೂ ಪ್ರತಿಭಾವಂತ ಬಾಲಕಿ ಕೃತಿ ಬಿ. ಅವರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ವಿಠ್ಠಲ ಮೂಲ್ಯ, ಸ್ಥಾಪಕಧ್ಯಕ್ಷ ಸುಂದರ್ ಬಿ.ಕುಲಾಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ಶೀನ ಮೂಲ್ಯ, ನೀಲಪ್ಪ ಸಾಲಿಯಾನ್ ಉಪಸ್ಥಿತರಿದ್ದರು. ಕಿಟ್ಟು ಮೂಲ್ಯ ಸ್ವಾಗತಿಸಿದರು. ಟಿ.ಶೇಷಪ್ಪ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಖಂಡಿಗ ವರದಿ ಮಂಡಿಸಿದರು. ವಿಶ್ವನಾಥ ಸಾಲಿಯಾನ್ ವಂದಿಸಿದರು. ಎಚ್.ಕೆ.ನೈನಾಡು ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net