

ಬ್ರಹ್ಮಾವರ:
ಹೇರೂರು ಸ್ನೇಹಾಲಯ ವೃದ್ಧಾಶ್ರಮದಲ್ಲಿ ಕೆಲಸದಲ್ಲಿದ್ದ ಕಿವಿಕೇಳದ ಮತ್ತು ಮಾತು ಬಾರದ 18 ವರ್ಷದ ಯುವಕ ಬುಧವಾರ ನಾಪತ್ತೆಯಾಗಿದ್ದಾನೆ. ಪಶ್ಚಿಮ ಬಂಗಾಳ ಮೂಲದ ಬೈಬೆಕ್ ಯೆಲ್ಲೋ ನಾಪತ್ತೆಯಾಗಿದ್ದಾರೆ.
2025 ಮೇ 28ರಂದು ಸಾಮಾಜಿಕ ಕಾರ್ಯಕರ್ತೆ ವೆರುನಿಕಾ ಈತನನ್ನು ಕರೆತಂದು ಆಶ್ರಮಕ್ಕೆ ಸೇರಿಸಿದ್ದರು. ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ, 5 ಅಡಿ ಎತ್ತರ ಇದ್ದು, ಕೆಂಪುಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ಅರ್ಧ ಪ್ಯಾಂಟ್ ಧರಿಸಿದ್ದಾರೆ. ಈತನ ಬಗ್ಗೆ ಮಾಹಿತಿ ಇದ್ದವರು ಬ್ರಹ್ಮಾವರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ.