ಹೆಬ್ರಿ: ಬ್ರಹ್ಮಾವರ ರಸ್ತೆಯಿಂದ ಹೆಬ್ರಿ ಕಡೆಗೆ ಬರುತ್ತಿದ್ದ ವೇಳೆ ಬ್ರಹ್ಮಾವರ ರಸ್ತೆ ಮೂರು ರಸ್ತೆ ಹುತ್ತುರ್ಕೆ ಬಳಿ ಶುಕ್ರವಾರ ಕಾರಿನ ಮೇಲೆ ಬೃಹತ್ ಮರ ಬಿದ್ದು ಕಾರಿನಲ್ಲಿದ್ದ 38ನೇ ಕಳ್ತೂರು ಗ್ರಾಮದ ದರ್ಖಾಸು ಮನೆ ನಿವಾಸಿ ಸದಾನಂದ ನಾಯಕ್ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅವರು ಬಸ್‌ಗೆ ಪಾರ್ಸೆಲ್ ಹಾಕಲು ಬರುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಘಟನೆಗೆ ಕೆಲ ಸೆಕೆಂಡ್‌ಗಳ ಮೊದಲು ಟ್ಯಾಂಕರ್ ಚಲಿಸಿದ್ದು, ಒಂದು ವೇಳೆ ಟ್ಯಾಂಕರ್ ಮೇಲೆ ಮರ ಬಿದ್ದಿದ್ದರೆ ಕಾರು ಚಾಲಕ ಉಳಿಯುತ್ತಿದ್ದ ಎಂದು ಸ್ಥಳೀಯರು ವಿವರಿಸಿದ್ದಾರೆ.
ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಘಟನೆ ನಡೆದ ಸಮೀಪವೇ ಸ್ಕೂಟಿ ಮೇಲೆ ಮರ ಬಿದ್ದು ಯುವತಿಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದರು.