ಪ್ರೇಮಿ ಜೊತೆ ಮಾತನಾಡುತ್ತಾ ಯುವಕ ಆತ್ಮಹತ್ಯೆ

ಯುವಕ ಆತ್ಮಹತ್ಯೆ
ಯುವಕ ಆತ್ಮಹತ್ಯೆ
Published on
ಉಡುಪಿ : ತಾನು ಪ್ರೀತಿಸುತ್ತಿದ್ದ ಹುಡುಗಿ ಜೊತೆ ಫೋನಿನಲ್ಲಿ ಮಾತನಾಡುತ್ತಾ ರೂಮಿನೊಳಗೆ ಹೋದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕುಂಜಿಬೆಟ್ಟು ನಿವಾಸಿ ರಂಜಿತ್​ (28) ಮೃತರು. ಇವರು ಪೆಂಟಿಂಗ್​ ಕೆಲಸವನ್ನು ಮುಗಿಸಿ ಮನೆಗೆ ಬಂದು ಮನೆಯವರೊಟ್ಟಿಗೆ ಮಾತನಾಡಿ ನಂತರ ರೂಮಿನೊಳಗೆ ಹೋಗಿದ್ದಾರೆ. ರಾತ್ರಿ 11 ಗಂಟೆಗೆ ಈತನ ತಂದೆ ರಾಜು ಮನೆಯ ವಾಟರ್​ ಟ್ಯಾಂಕಿನ ನೀರು ತುಂಬಿ ಕೆಳಗೆ ಬೀಳುತ್ತಿದ್ದರಿಂದ ವಾಟರ್​ ಟ್ಯಾಂಕಿನ ವಾಲ್​ ಆಫ್​ ಮಾಡಲು ಹೋದಾಗ ರಂಜಿತ್​ ರೂಮಿನ ಕಿಟಕಿ ತೆರೆದಿದ್ದು, ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇರುವುದು ಕಂಡು ಬಂದಿತ್ತು. ಕೂಡಲೇ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net