

ಪಡುಬಿದ್ರಿ: ಕುಡಿತದ ಚಟಹೊಂದಿದ್ದ ಯುವಕನೋರ್ವ ಹೆಜಮಾಡಿ ಗ್ರಾಮ ಪಂಚಾಯಿತಿ ಹಿಂದೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗುರುಪುರ ಕೈಕಂಬದ ಚೇತನ್ ಪೂಜಾರಿ(45) ಎಂಬುವರು ಹೆಜಮಾಡಿ ಗ್ರಾಪಂ ಎಸ್‌ಎಲ್‌ಆರ್‌ಎಂ ಘಟಕದ ವಾಹನ ಶೆಡ್‌ನಲ್ಲಿ ಸೋಮವಾರ ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದು, ಕಳೆದ 3 ವರ್ಷಗಳಿಂದ ಮನೆ ಬಿಟ್ಟು ಬಂದು ಕೂಲಿ ಕೆಲಸ ಮಾಡಿಕೊಂಡಿದ್ದರು. ಹೆಜಮಾಡಿ ಮೀನು ಮಾರುಕಟ್ಟೆಯಲ್ಲಿ ರಾತ್ರಿ ಮಲಗುತ್ತಿದ್ದರು. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.