ಹಿಂದುತ್ವ ನಾಶ ಮಾಡಲು ನಿಮ್ಮಿಂದಾಗದು; ಸುನೀಲ್​ ಕೆ.ಆರ್​. ಆಕ್ರೋಶ

ನವದೆಹಲಿಯಲ್ಲಿ ನಡೆದ ಇಸ್ಲಾಮಿಕ್​ ಭಯೋತ್ಪಾದನಾ ಕೃತ್ಯ ಖಂಡಿಸಿ ಉಡುಪಿಯ ಜಟ್ಕಾ ಸ್ಟ್ಯಾಂಡ್​ ಬಳಿ ಹಿಂದು ಜಾಗರಣಾ ವೇದಿಕೆಯ ಉಡುಪಿ ಘಟಕದ ಪದಾಧಿಕಾರಿಗಳು ಪ್ರತಿಭಟಿಸಿದರು. ಸುನೀಲ್​ ಕೆ.ಆರ್​., ರತ್ನಾಕರ್​ ಅಮೀನ್​, ರಾಜೇಶ್​ ಉಚ್ಚಿಲ, ಕುತ್ಯಾರು ನವೀನ ಶೆಟ್ಟಿ, ಪ್ರಭಾಕರ ಪೂಜಾರಿ, ರೇಶ್ಮಾ ಶೆಟ್ಟಿ, ಶಿಲ್ಪಾ ಸುವರ್ಣ ಇತರರಿದ್ದರು.
ನವದೆಹಲಿಯಲ್ಲಿ ನಡೆದ ಇಸ್ಲಾಮಿಕ್​ ಭಯೋತ್ಪಾದನಾ ಕೃತ್ಯ ಖಂಡಿಸಿ ಉಡುಪಿಯ ಜಟ್ಕಾ ಸ್ಟ್ಯಾಂಡ್​ ಬಳಿ ಹಿಂದು ಜಾಗರಣಾ ವೇದಿಕೆಯ ಉಡುಪಿ ಘಟಕದ ಪದಾಧಿಕಾರಿಗಳು ಪ್ರತಿಭಟಿಸಿದರು. ಸುನೀಲ್​ ಕೆ.ಆರ್​., ರತ್ನಾಕರ್​ ಅಮೀನ್​, ರಾಜೇಶ್​ ಉಚ್ಚಿಲ, ಕುತ್ಯಾರು ನವೀನ ಶೆಟ್ಟಿ, ಪ್ರಭಾಕರ ಪೂಜಾರಿ, ರೇಶ್ಮಾ ಶೆಟ್ಟಿ, ಶಿಲ್ಪಾ ಸುವರ್ಣ ಇತರರಿದ್ದರು.
Published on
ಉಡುಪಿ: 'ವೈದ್ಯೋ ನಾರಾಯಣೋ ಹರಿ:' ಎಂದು ಆರಾಧಿಸುವ ದೇಶ ನಮ್ಮದು. ವೈದ್ಯರೂ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವುದು ದುರಂತ. ಎಂಬಿಬಿಎಸ್​ ಶಿಕ್ಷಣ ಗಳಿಸಿ ಸ್ತ್ರೀ ತಜ್ಞರಾಗಿ, ಹೃದಯ ತಜ್ಞರಾಗಿ ಜನರ ಜೀವ ಉಳಿಸಬೇಕಿದ್ದ ವೈದ್ಯರು ಬಾಂಬ್​ ಸ್ಫೋಟಿಸಿ ಜನರ ಜೀವ ತೆಗೆಯುವ ರಾಕ್ಷಸರಾಗಿದ್ದಾರೆ. ಹಿಂದುತ್ವ ಹಿಮ್ಮೆಟ್ಟಿಸಿ ಇಸ್ಲಾಮಿಕ್​ ರಾಷ್ಟ್ರವನ್ನಾಗಿ ಪರಿವರ್ತಿಸುವ ಹುನ್ನಾರ ಇದಾಗಿದೆ. ಆದರೆ, ಹಿಂದುತ್ವದ ನಾಶ ಮಾಡುವುದು ನಿಮ್ಮಿಂದ ಅಸಾಧ್ಯ ಎಂದು ವಿಶ್ವ ಹಿಂದು ಪರಿಷತ್​ನ ದಕ್ಷಿಣ ಪ್ರಾಂತ ಪ್ರಮುಖ ಸುನೀಲ್​ ಕೆ.ಆರ್​. ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ನ.10ರಂದು ನಡೆದ ಇಸ್ಲಾಮಿಕ್​ ಭಯೋತ್ಪಾದನಾ ಕೃತ್ಯ ಖಂಡಿಸಿ ಉಡುಪಿಯ ಜಟ್ಕಾ ಸ್ಟ್ಯಾಂಡ್​ ಬಳಿ ಹಿಂದು ಜಾಗರಣಾ ವೇದಿಕೆಯ ಉಡುಪಿ ಘಟಕದ ವತಿಯಿಂದ ಶನಿವಾರ (ನ.15) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹೋರಾಟ ಅನಿವಾರ್ಯ

ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಪ್ರಮುಖ ರತ್ನಾಕರ್​ ಅಮೀನ್​ ಮಾತನಾಡಿ, ದೇಶದಲ್ಲಿ ಕಳೆದ 10 ವರ್ಷದಿಂದ ನಿರಂತರವಾಗಿ ಬಾಂಬ್​ ಸ್ಫೋಟ, ಗುಂಡಿನ ಸುರಿಮಳೆ, ಲವ್​ ಜಿಹಾದ್​ ಪ್ರಕರಣ, ಹಿಂದುಗಳ ಕಗ್ಗೊಲೆ, ಹಿಂದು ಹೆಣ್ಣು ಮಕ್ಕಳ ಅತ್ಯಾಚಾರಗಳ ಮೂಲಕ ಹಿಂದು ಸಮಾಜ ನಾಶ ಮಾಡುವ ಷಡ್ಯಂತ್ರ ನಡೆದಿದೆ. ಕಾಪೀರರಾದ ಹಿಂದುಗಳನ್ನು ಹತ್ಯೆ ಮಾಡಬೇಕೆಂಬ ಮಹಮ್ಮದ್​ ಅಲಿ ಜಿನ್ನಾನ ಆಜ್ಞೆಯಂತೆ ಇಸ್ಲಾಮಿಕ್​ ಭಯೋತ್ಪಾದಕರು ಇಂತಹ ಹಿಂಸಾತ್ಮಕ ಕಾರ್ಯ ನಡೆಸಿದ್ದಾರೆ. ಭಾರತವನ್ನು ಪಾಕಿಸ್ತಾನ ಮಾಡುವ ಯತ್ನ ನಡೆದಿದೆ. ಬಡತನದಿಂದಾಗಿ ಇಸ್ಲಾಂ ಜನರು ಈ ಕೃತ್ಯ ಮಾಡುತ್ತಿರುವುದಾಗಿ ರಾಜಕಾರಣಿಗಳು ಹೇಳುತ್ತಾರೆ. ಬಾಂಬ್​ ಸ್ಫೋಟಿಸಿದವರು ಯಾರೂ ಬಡವರಲ್ಲ. ಅವರೆಲ್ಲ ವೈದ್ಯರು. ಹಿಂದುಗಳನ್ನು ಕೊಲ್ಲುವುದೇ ಅವರ ಉದ್ದೇಶ. ಹೀಗಾಗಿ ಮಸೀದಿ, ಮದರಸಾಗಳಲ್ಲೂ ಸಹ ಹಿಂದುಗಳನ್ನು ಕೊಲ್ಲುವ ವಿಚಾರವಾಗಿಯೇ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ದೇಶ, ನಮ್ಮೆಲ್ಲರ ಕುಟುಂಬದ ರಕ್ಷಣೆಗಾಗಿ, ಹಿಂದುತ್ವದ ಆಧಾರದಲ್ಲಿಯೇ ಬದುಕಬೇಕಾದರೆ ಹೋರಾಟ ಅನಿವಾರ್ಯ ಎಂದರು.
ಪ್ರತಿಭಟನೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ರಾಜೇಶ್​ ಉಚ್ಚಿಲ, ಪ್ರಾಂತ ಪ್ರಮುಖ ಮಹೇಶ್​ ಬೈಲೂರು, ಉಮೇಶ ಸೂಡ, ದಿನೇಶ್​ ಮೆಂಡನ್​, ಬಜಿಎಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ ಶೆಟ್ಟಿ, ನಗರಸಭಾ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಉಡುಪಿ ಗ್ರಾಮಾಂತರ ಮಂಡಳ ಅಧ್ಯಕ್ಷ ರಾಜೀವ ಕುಲಾಲ್​, ಅಲ್ಪಸಂಖ್ಯಾತ ಮೋರ್ಚಾದ ಮಾಜಿ ಅಧ್ಯಕ್ಷ ದಾವೂದ್​ ಅಬೂಬಕ್ಕರ್​, ಸತ್ಯಾನಂದ ನಾಯಕ್​ ಆತ್ರಾಡಿ, ಸತೀಶಕುಮಾರ್​, ರಾಧಾಕೃಷ್ಣ ಮೆಂಡನ್​, ವಿಜಯ ಕೊಡವೂರು, ಗಿರೀಶ್​ ಅಂಚನ್​, ಶ್ರೀನಿಧಿ ಹೆಗ್ಡೆ, ರೇಶ್ಮಾ ಉದಯ ಶೆಟ್ಟಿ, ಶಿಲ್ಪಾ ಜಿ. ಸುವರ್ಣ, ಸಂಧ್ಯಾ ರಮೇಶ್​ ಇತರರು ಪಾಲ್ಗೊಂಡಿದ್ದರು.
"

ದೇಶ ರಕ್ಷಣೆ ಹಾಗೂ ಅಧಮೀರ್ಯರ ದುಷ್ಕೃತ್ಯದ ವಿಚಾರದಲ್ಲಿ ಯಾರೂ ರಾಜಿಯಾಗಬಾರದು. ನವದೆಹಲಿಯಲ್ಲಿ ನಡೆದ ಘಟನೆ ಎಲ್ಲರೂ ಖಂಡಿಸಬೇಕು. ಭಯೋತ್ಪಾದನೆ ಒಮ್ಮೆ ಗೆಲ್ಲಬಹುದು. ನಾವು ಯಾವಾಗಲೂ ಗೆಲ್ಲಬೇಕು. ದೇಶದ ವಿವಿಧೆಡೆ ಸಂಭವಿಸಲಿದ್ದ ಭಯೋತ್ಪಾದಕ ಕೃತ್ಯವನ್ನು ಭದ್ರತಾ ಪಡೆ ತಡೆದಿದೆ. ಕಾರ್​ ಬಾಂಬ್​ ಸ್ಫೋಟದ ರೂವಾರಿಯ ಮನೆಯನ್ನೇ ಧ್ವಂಸ ಮಾಡಿ ಪ್ರತ್ಯುತ್ತರ ನೀಡಿದೆ. ಕೃತ್ಯ ನಡೆಸಿದ, ಅದಕ್ಕೆ ಸಹಕರಿಸಿದ ಎಲ್ಲರಿಗೂ ಶಿಕ್ಷೆಯಾಗಬೇಕು. ಪಕ್ಷ, ಧರ್ಮ, ಜಾತಿ ಬಿಟ್ಟು ದೇಶ ರಕ್ಷಣೆಗೆ ನಾವೆಲ್ಲರೂ ಒಗ್ಗೂಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net