ಉಡುಪಿ: ಭಾರತವು ಜಗತ್ತಿಗೆ ನೀಡಿದ ಅಮೂಲ್ಯ ಕೊಡುಗೆ ಯೋಗ ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಜನಪ್ರಿಯವಾಗಿದೆ. ಆಧುನಿಕ ಜೀವನಶೈಲಿಯ ಕಾಯಿಲೆ ಮತ್ತು ವೃದ್ಧಾಪ್ಯದ ಸವಾಲುಗಳಿಗೆ ಯೋಗವು ಅತ್ಯುತ್ತಮ, ಸರಳ ಪರಿಹಾರವಾಗಿದೆ. ವೈದ್ಯ ವಿಜ್ಞಾನವು ಆಯಸ್ಸನ್ನು ಹೆಚ್ಚಿಸಿದರೆ ಯೋಗವು ಜೀವನೋತ್ಸಾಹ ತುಂಬುತ್ತದೆ ಎಂದು ಮಾಹೆ ಕುಲಪತಿ ಡಾ. ಶರತ್ ಕೆ. ರಾವ್ ಹೇಳಿದರು.