ಯಕ್ಷಗಾನ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ ನಿಧನ

ಯಕ್ಷಗಾನ ಹಿರಿಯ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ.
ಯಕ್ಷಗಾನ ಹಿರಿಯ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ.
Published on

* ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧಕ

ಉಡುಪಿ: ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಕೊಕ್ಕುಡ್ತಿ ಕೃಷ್ಣಮೂರ್ತಿ(75) ಭಾನುವಾರ (ಆ.2) ನಿಧನರಾದರು. 
ನಾಡಿನ ಪ್ರಸಿದ್ಧ ಬಯಲಾಟ ಮೇಳಗಳಾದ ಶ್ರೀ ಕ್ಷೇತ್ರ ಮಂದಾರ್ತಿ, ಮಾರಣಕಟ್ಟೆ, ಶಿವರಾಜಪುರ, ಶ್ರೀ ಕ್ಷೇತ್ರ ಸೋಮವಾರ ಸಂತೆ, ಗೋಳಿ ಗರಡಿ ಮೇಳ ಹಾಗೂ ಇನ್ನಿತರ ಅನೇಕ ಮೇಳಗಳಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಯಕ್ಷಗಾನ ಸೇವೆಗೈದಿದ್ದರು. 
ಪೌರಾಣಿಕ ಕಥಾನಕಗಳಲ್ಲಿ ಎಲ್ಲ ರೀತಿಯ ಪುರುಷ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿ ಕಲಾ ಪ್ರೇಕ್ಷಕರ ಮನಗೆದಿದ್ದರು. 
ಅವರ ಕಲಾ ಸೇವೆ ಗುರುತಿಸಿ ಅಕಾಡೆಮಿಯ ಪ್ರಶಸ್ತಿ, ಉಡುಪಿಯ 'ಯಕ್ಷಗಾನ ಕಲಾರಂಗ' ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿ ಹಾಗೂ ಸನ್ಮಾನಕ್ಕೆ ಭಾಜನರಾಗಿದ್ದರು. ಮೃತರಿಗೆ ನಾಲ್ವರು ಪುತ್ರರಿದ್ದಾರೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್​ ರಾವ್​, ಕಾರ್ಯದರ್ಶಿ ಮುರಳಿ ಕಡೆಕಾರ್​ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net