ಯಕ್ಷಗಾನ ಶೈಲಿ ಸ್ವಾತಂತ್ರೃಕ್ಕೆ ಅಡ್ಡಿಯಾಗದು ಪಠ್ಯಕ್ರಮ

 ಯಕ್ಷಗಾನ ಪಠ್ಯ ರೂಪೀಕರಣ ಕಾರ್ಯಾಗಾರದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕುಲಪತಿ ಪ್ರೊ.ಪಿ.ಎಲ್.ಧರ್ಮ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ, ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಗಾನ ಪಠ್ಯ ರೂಪೀಕರಣ ಕಾರ್ಯಾಗಾರದಲ್ಲಿ ಭಾಗವತ ಪಟ್ಲ ಸತೀಶ್ ಶೆಟ್ಟಿ, ಕುಲಪತಿ ಪ್ರೊ.ಪಿ.ಎಲ್.ಧರ್ಮ, ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ, ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯಕ್ಷಗಾನದಲ್ಲಿ ಹಲವು ಪರಂಪರೆಗಳಿದ್ದು, ಪಠ್ಯಕ್ರಮ ಒಂದು ಮಾರ್ಗರೂಪಣೆಯೇ ಹೊರತು ಶೈಲಿಯ ಸ್ವಾತಂತ್ರ ್ಯಕ್ಕೆ ಅಡ್ಡಿಯಾಗಲಾರದು ಎಂದು ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಯಕ್ಷಗಾನ ಪಠ್ಯ ರೂಪೀಕರಣ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿ, ಮೌಲ್ಯಗಳೇ ನಮ್ಮ ಪರಂಪರೆಯ ಬದುಕಾಗಿದ್ದು, ಯಕ್ಷಗಾನದಲ್ಲಿ ಯಾವುದೇ ಹೊಸ ಪ್ರಯೋಗಗಳು ನಡೆದರೂ ಅದರ ಮೂಲ ಮೌಲ್ಯಗಳಿಗೆ ಧಕ್ಕೆಯಾಗಬಾರದು. ಶ್ರೀಮಂತ ಕಲೆ ಯಕ್ಷಗಾನಕ್ಕೆ ವಿಶೇಷ ಪರೀಕ್ಷೆಯ ಮೂಲಕ ಶೈಕ್ಷಣಿಕ ಆಯಾಮ ಒದಗಿ ಬರುತ್ತಿರುವುದು ಮಹತ್ವದ ಸಂಗತಿ ಎಂದರು.
ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕ ಡಾ.ಧನಂಜಯ ಕುಂಬ್ಳೆ, ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಯಕ್ಷಗಾನ ತಜ್ಞರಾದ ಪದ್ಮನಾಭ ಉಪಾಧ್ಯಾಯ, ಗುಂಡ್ಮಿ ಸದಾನಂದ ಐತಾಳ, ಎ.ಪಿ ಪಾಠಕ್, ಪ್ರಕಾಶ್ ಮೂಡಿತ್ತಾಯ, ಪಣಂಬೂರು ವಾಸುದೇವ ಐತಾಳ, ಸುಜಯೀಂದ್ರ ಹಂದೆ, ಎನ್.ಜಿ.ಹೆಗಡೆ, ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ, ರಾಜಾರಾಮ ಹೊಳ್ಳ ಕೈರಂಗಳ, ಕೃಷ್ಣಪ್ರಕಾಶ ಉಳಿತ್ತಾಯ, ಕೌಶಿಕ್ ರಾವ್ ಪುತ್ತಿಗೆ, ಮಯೂರ ನಾಯ್ಗ, ಶೈಲೇಶ್ ತೀರ್ಥಹಳ್ಳಿ ಉಪಸ್ಥಿತರಿದ್ದರು. ಯಕ್ಷಗಾನ ಗುರು ದೀವಿತ್ ಕೋಟ್ಯಾನ್ ಸ್ವಾಗತಿಸಿದರು. ಸಂಶೋಧನಾ ಅಧಿಕಾರಿ ಡಾ.ಸತೀಶ್ ಕೊಣಾಜೆ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.

ನೂರಾರು ವರ್ಷಗಳ ಇತಿಹಾಸವಿರುವ ಯಕ್ಷಗಾನ ಶೈಕ್ಷಣಿಕ ಅವರಣಕ್ಕೆ ಬರುತ್ತಿರುವುದನ್ನು ನಾವು ಸ್ವಾಗತಿಸಬೇಕು. ಯಕ್ಷಗಾನ ವಿಶ್ವವಿದ್ಯಾಲಯದ ಮೂಲಕ ಶೈಕ್ಷಣಿಕವಾಗಿ ಗುರುತಿಸಿಕೊಂಡರೆ ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆಯಲು ಸಾಧ್ಯ. ಈ ಕಲೆಯನ್ನು ಸಂಪ್ರದಾಯ ಬದ್ದವಾಗಿ ಮುಂದಿನ ತಲೆಮಾರಿಗೆ ದಾಟಿಸುವುದು ನಮ್ಮೆಲ್ಲರ ಜವಾಬ್ದಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net