ಉಡುಪಿಯಲ್ಲಿ ಆಯೋಜಿಸಿದ್ದ ವಿದ್ಯಾಪೋಷಕ್ ಸಮಾವೇಶವನ್ನು ಟಿ.ಅಶೋಕ್ ಪೈ ಉದ್ಘಾಟಿಸಿದರು. ಸಂಪತ್ ಕುಮಾರ್ ಶೆಟ್ಟಿ, ಪ್ರವೀಣ್ ಗುಡಿ, ಪುರುಷೋತ್ತಮ್ ಶೆಟ್ಟಿ, ಸುರೇಶ್ ನಾಯಕ್, ಎಚ್.ನಾಗರಾಜ್ ಶೆಟ್ಟಿ, ಪಿ.ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ, ಪ್ರೊ. ಕೆ.ಸದಾಶಿವ್ ರಾವ್, ಎಂ.ಗಂಗಾಧರ್ ರಾವ್, ಮುರಳಿ ಕಡೆಕಾರ್, ನಾರಾಯಣ ಎಂ. ಹೆಗಡೆ ಇದ್ದರು.
Published on:
Copied
Follow Us
*
ಡಾ. ಟಿಎಂಎ ಪೈ
ಟ್ರಸ್ಟ್ನ ಅಧ್ಯಕ್ಷ
ಟಿ.ಅಶೋಕ್ ಪೈ ಬಣ್ಣನೆ
* ವಿದ್ಯಾಪೋಷಕ್ ವಿದ್ಯಾರ್ಥಿಗಳು, ಪಾಲಕರ ಸಮಾವೇಶ
ಉಡುಪಿ: ಐದು ದಶಕದ ಹಿಂದೆ ಹೆಣ್ಣುಮಕ್ಕಳು ಶಾಲೆಗೆ ಹೋಗಲು ಹಿಂಜರಿಯುತ್ತಿದ್ದರು. ಅಂತಹ ಕಾಲದಲ್ಲಿ ಡಾ. ಟಿಎಂಎ ಪೈ ಸ್ಥಾಪಿಸಿದ ವಿದ್ಯಾ ಸಂಸ್ಥೆಗಳಲ್ಲಿ ಹುಡುಗಿಯರ ಶಿಕ್ಷಣಕ್ಕೆ ಪ್ರಥಮ ಮಹತ್ವ ಕೊಟ್ಟಿದ್ದರು. ಇಂದಿನ ಈ ಸಭಾಂಗಣದಲ್ಲಿ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿರುವುದು ಶಿಕ್ಷಣದ ಶಕ್ತಿಗೆ ನಿದರ್ಶನ. ಯಕ್ಷಗಾನ ಕಲಾರಂಗ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಮನೆ ನಿರ್ಮಾಣ ಸೇರಿ ಆ ಕುಟುಂಬದ ಸಂಕಷ್ಟಗಳಿಗೆ ಸ್ಪಂದಿಸುವ ರೀತಿ ಬೆರಗು ಮೂಡಿಸುತ್ತದೆ ಎಂದು ಮಣಿಪಾಲದ ಡಾ. ಟಿಎಂಎ ಪೈ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಟಿ.ಅಶೋಕ್ ಪೈ ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಸಂಸ್ಥೆಯ ವಿದ್ಯಾಪೋಷಕ್ ಯೋಜನೆಯಡಿ ಈ ವರ್ಷ ಆಯ್ಕೆಗೊಂಡ ಪ್ರಥಮ ಪಿಯುಸಿ ವಿದ್ಯಾರ್ಥಿಗಳು ಮತ್ತು ಪಾಲಕರಿಗಾಗಿ ಮಂಗಳವಾರ (ಆ.25) ಆಯೋಜಿಸಿದ್ದ ಸಮಾಲೋಚನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಸಾಧನೆಗೆ ಪರಿಶ್ರಮ ಅಗತ್ಯ
ಕೃಷ್ಣ ಪ್ರಸಾದ್ ಕ್ಯಾಶ್ಯೂ ಇಂಡಸ್ಟ್ರೀಸ್ನ ಮಾಲೀಕ ಸಂಪತ್ ಕುಮಾರ್ ಶೆಟ್ಟಿ ಮಾತನಾಡಿ, ಕನಸು ಕಾಣುತ್ತ ಕುಳಿತರೆ ಉದ್ದೇಶಿತ ಗುರಿ ಸಾಧಿಸಲು ಅಸಾಧ್ಯ. ಅದಕ್ಕೆ ನಿರಂತರ ಪರಿಶ್ರಮ ಅಗತ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ. ಸುದರ್ಶನಮೂರ್ತಿ, ಡಾ. ಲಕ್ಷ್ಮೀ ಎಸ್. ಮೂರ್ತಿ, ಹುಬ್ಬಳ್ಳಿಯ ಮೈ ಲೈಫ್ ಸಂಸ್ಥೆಯ ಸ್ಥಾಪಕ ಪ್ರವೀಣ್ ಗುಡಿ ಇತರರು ಮಾರ್ಗದರ್ಶಿ ಮಾತುಗಳನ್ನಾಡಿದರು.
ಸಂಸ್ಥೆಯ ಸದಸ್ಯರಾದ ಯು.ವಿಶ್ವನಾಥ್ ಶೆಣೈ, ಯು.ಎಸ್. ರಾಜಗೋಪಾಲ್ ಆಚಾರ್ಯ, ವಿಜಯ ಕುಮಾರ ಮುದ್ರಾಡಿ, ಭುವನಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ನಿರಂಜನ ಭಟ್, ಮರ್ಣೆ ಉಮೇಶ ಭಟ್, ಗಣೇಶ್ ರಾವ್ ಎಲ್ಲೂರು, ಅಶೋಕ್ ಎಂ., ನಟರಾಜ್ ಉಪಾಧ್ಯಾಯ, ಸಂತೋಷ್ ಶೆಟ್ಟಿ, ಪ್ರಭಾಕರ್ ಭಂಡಿ, ಡಾ. ಪ್ರತಿಮಾ ಜೆ. ಆಚಾರ್ಯ, ಡಾ. ರಾಘವೇಂದ್ರ ರಾವ್, ಆರ್. ವಸಂತ್, ರಂಜಿನಿ ವಸಂತ್, ತಾರಾದೇವಿ, ನಾಗರಾಜ್ ಹೆಗಡೆ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಸಹಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ವಂದಿಸಿದರು.
ಪ್ರಸ್ತುತ ವರ್ಷ ವಿದ್ಯಾಪೋಷಕ್ಗೆ ಕನ್ನಡ ಮಾಧ್ಯಮದಲ್ಲಿ ಓದಿ ಶೇ.80ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದ ಒಟ್ಟು 652 ಅರ್ಜಿ ಬಂದಿದ್ದು ಅದರಲ್ಲಿ ಆಯ್ಕೆಯಾದ 291 ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಅಗಲಿದ ವಿದ್ಯಾಪೋಷಕ್ ವಿದ್ಯಾರ್ಥಿನಿ ಪ್ರಮಿತಾಳಿಗೆ ನುಡಿನಮನ ಸಲ್ಲಿಸಲಾಯಿತು.